Publish Date: Thu, 29 Mar 2018 (18:38 IST)
Updated Date: Thu, 29 Mar 2018 (18:39 IST)
ಪರವಾನಗಿ ಪಡೆಯದ ಹಿನ್ನಲೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾ ಚಾರ್ಯ ನೇತೃತ್ವದಲ್ಲಿ ನಡೆಯುತ್ತಿದ್ದ ಬಿಜೆಪಿ ಮುಷ್ಠಿ ಧಾನ್ಯ ಅಭಿಯಾನಕ್ಕೆ ಚುನಾವಣಾ ಅಧಿಕಾರಿಗಳು ತಡೆಯೊಡ್ಡಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕೂಲಂಬಿ ಗ್ರಾಮದಲ್ಲಿ ನಡೆದಿದ್ದ ಅಭಿಯಾನ ಅಂಗವಾಗಿ ಮುಷ್ಟಿ ಧಾನ್ಯ ಸಂಗ್ರಹಿಸುತ್ತಿದ್ದ ರೇಣುಕಾ ಚಾರ್ಯ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ.
ರೇಣುಕಾ ಚಾರ್ಯ ಅಭಿಯಾನಕ್ಕೆ ತಡೆ ನೀಡಿದ ಉಪ ತಹಶಿಲ್ದಾರ್ ಪರಮೇಶ ನಾಯ್ಕ, ಅಕ್ಕಿ ಸಂಗ್ರಹಿಸುತ್ತಿದ್ದ ವಾಹನಕ್ಕೆ ಪರವಾನಗಿ ಪಡೆಯದ ಹಿನ್ನೆಲೆ ಅಭಿಯಾನಕ್ಕೆ ತಡೆ ನೀಡಿದ್ದು ಪರವಾನಗಿ ಪಡೆದು ಧಾನ್ಯ ಸಂಗ್ರಹ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.