Publish Date: Fri, 30 Mar 2018 (13:28 IST)
Updated Date: Fri, 30 Mar 2018 (13:35 IST)
ಬೆಂಗಳೂರು: ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಪ್ರಧಾನಿ ಮೋದಿ ವಿರುದ್ಧ ವಾಚಮಗೋಚರವಾಗಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಬರೀ ಮಾತಾಡ್ತಾರೆ, ಕೆಲಸ ಮಾಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಭಾಷಣ ಮಾಡಿದ ಸಿಎಂ ಇಬ್ರಾಹಿಂ ‘ಮನಮೋಹನ್ ಸಿಂಗ್ ಮಾತಾಡ್ತಿರಲಿಲ್ಲ, ಆದರೆ ಕೆಲಸ ಮಾಡ್ತಿದ್ದರು. ಆದರೆ ಈ ಮುಂಡೇದು ಮೋದಿ ಬರೀ ಮಾತಾಡುತ್ತೆ, ಕೆಲಸ ಮಾಡಲ್ಲ’ ಎಂದಿದ್ದಾರೆ.
‘ಮೋದಿ ಮಾತಾಡುವಾಗಲೆಲ್ಲಾ ಅಚ್ಚೇ ದಿನ್ ಆಯೇಗಾ ಅಂತಾರೆ. ಎಲ್ಲಿ ಅಚ್ಚೇ ದಿನ್? ಬರೀ ಖಾಲಿ ದಿನ್. ತರಕಾರಿ ಮಾರೋ ಗಂಗಮ್ಮಂಗೆ ಡೆಬಿಟ್ ಕಾರ್ಡ್ ಕೊಟ್ರಾ? ಮೀನು ಮಾರೋ ಹುಸೇನ್ ಸಾಬ್ ಗೆ ಕೊಟ್ರೆ?’ ಎಂದು ಇಬ್ರಾಹಿಂ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ