Select Your Language

Notifications

webdunia
webdunia
webdunia
webdunia

ಇಂತಹ ಪದಾರ್ಥಗಳನ್ನು ಸೇವಿಸಿದರೆ ಕಾಮಾಸಕ್ತಿ ಕಡಿಮೆಯಾಗುತ್ತದೆಯಂತೆ!

ಇಂತಹ ಪದಾರ್ಥಗಳನ್ನು ಸೇವಿಸಿದರೆ ಕಾಮಾಸಕ್ತಿ ಕಡಿಮೆಯಾಗುತ್ತದೆಯಂತೆ!
ಬೆಂಗಳೂರು , ಶುಕ್ರವಾರ, 30 ಮಾರ್ಚ್ 2018 (10:56 IST)
ಬೆಂಗಳೂರು : ಸಾಮಾನ್ಯವಾಗಿ ವಯಸ್ಸಾದ ಹಾಗೇ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಆದರೆ ಕೆಲವರಿಗೆ ಅದಕ್ಕೂ ಮೊದಲೇ ಕಾಮಾಸಕ್ತಿ ಕಡಿಮೆಯಾಗುತ್ತದೆ. ಇದಕ್ಕೆ ಕಾರಣ ಅವರು ಸೇವಿಸುವ ಆಹಾರಗಳು. ಕೆಲವು ಆಹಾರ ಪದಾರ್ಥಗಳು ಕಾಮಾಸಕ್ತಿಗಳನ್ನು ಕುಗ್ಗಿಸುತ್ತವೆ.


ಬಿಳಿ ಬ್ರೆಡ್ : ಇದರಲ್ಲಿರುವ ಸಂಸ್ಕರಿತ ಕಾರ್ಬ್ರೋಹೈಡ್ರೇಟ್ಸ್ ಗಳು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಸಂಸ್ಕರಿತ ಕಾರ್ಬ್ರೋಹೈಡ್ರೇಟ್ಸ್ 3/2 ಭಾಗದಷ್ಟು ಸತು ಕಳೆದುಕೊಳ್ಳುವುದು. ಸತು ಪುರುಷರಲ್ಲಿ ಕಾಮಾಸಕ್ತಿ ಕುಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.


ಸೋಯಾಬೀನ್ಸ್ : ಸೋಯಾಬೀನ್ ಮಹಿಳೆಯ ಅಂಡಾಶಯದ ಚಟುವಟಿಕೆ ಮತ್ತು ಲೈಂಗಿಕ ಹಾರ್ಮೋನುಗಳ ಮೇಲೆ ಪ್ರಭಾವ ಬೀರುವುದು. ಇದು ಪುರುಷರಲ್ಲಿ ವೀರ್ಯದ ಉತ್ಪತ್ತಿಯನ್ನು ಶೇ.40ರಷ್ಟು ಕುಗ್ಗಿಸುವುದು. ನಿಮಗೆ ಸೋಯಾ ಉತ್ಪನ್ನಗಳು ಇಷ್ಟವಾಗಿದ್ದರೆ ಇದು ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವುದು ಖಚಿತ.


ಸಕ್ಕರೆ : ಅತಿಯಾಗಿ ಸಕ್ಕರೆ ಸೇವನೆ ಮಾಡಿದರೆ ಅದರಿಂದ ಸೊಂಟದ ಸುತ್ತಲು ಬೊಜ್ಜು ಬರುವುದು. ಇದು ಹಲವಾರು ರೀತಿಯ ಕಾಯಿಲೆಗಳ ಜತೆಗೆ ಕಾಮಾಸಕ್ತಿಯನ್ನು ತಗ್ಗಿಸುವುದು. ರಕ್ತದಲ್ಲಿನ ಅತಿಯಾದ ಸಕ್ಕರೆಯಂಶವು ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ಕಡಿಮೆ ಮಾಡುವುದು. ಇದರಿಂದಾಗಿ ಕಾಮಾಸಕ್ತಿ ಹೆಚ್ಚಿಸುವ ಹಾರ್ಮೋನ್ ಟೆಸ್ಟೋಸ್ಟೆರಾನ್ ಉತ್ಪತ್ತಿಯು ಕಡಿಮೆಯಾಗುವುದು. ಸೊಂಟದ ಸುತ್ತಲಿನ ಬೊಜ್ಜಿನಿಂದಾಗಿ ಈಸ್ಟೋಜನ್ ಉತ್ಪತ್ತಿಯಾಗುವುದು. ಇದು ಕೂಡ ಕಾಮಾಸಕ್ತಿ ತಗ್ಗಿಸುವುದು.


ಪುದೀನಾ : ಇದು ಬಾಯಿಗೆ ಸುವಾಸನೆ ನೀಡುವುದು. ಆದರೆ ಇದರಲ್ಲಿ ಇರುವ ಮೆಂಥಾಲ್ ಟೆಸ್ಟೋಸ್ಟೆರಾನ್ ಮಟ್ಟವನ್ನು ತಗ್ಗಿಸುವುದರ ಜೊತೆಗೆ ಲೈಂಗಿಕಾಸಕ್ತಿಯನ್ನು  ತಗ್ಗಿಸುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊಟ್ಟೆ ಮತ್ತು ಹಾಲು ಎರಡನ್ನು ಒಟ್ಟಿಗೆ ಸೇವನೆ ಮಾಡಿದರೆ ಏನಾಗುತ್ತೆ ತಿಳಿದಿದೆಯಾ…?