Select Your Language

Notifications

webdunia
webdunia
webdunia
webdunia

ಸಕ್ಕರೆ ಸೇವಿಸುತ್ತಿದ್ದೀರಾ…? ಇಲ್ಲಿದೆ ನೋಡಿ ನಿಮಗೊಂದು ಗುಡ್ ನ್ಯೂಸ್!

ಸಕ್ಕರೆ ಸೇವಿಸುತ್ತಿದ್ದೀರಾ…? ಇಲ್ಲಿದೆ ನೋಡಿ ನಿಮಗೊಂದು ಗುಡ್ ನ್ಯೂಸ್!
ಬೆಂಗಳೂರು , ಗುರುವಾರ, 15 ಮಾರ್ಚ್ 2018 (11:30 IST)
ಬೆಂಗಳೂರು: ಕೆಲವರಿಗೆ ಅತೀಯಾಗಿ ಸಕ್ಕರೆ ಸೇವಿಸುವ ಅಭ್ಯಾಸವಿರುತ್ತದೆ. ಟೀ ಕಾಫಿ, ಕೆಲವೊಮ್ಮೆ ದೋಸೆಗೂ ಕೆಲವರು ಸಕ್ಕರೆ ಹಾಕಿಕೊಂಡು ತಿನ್ನುವ ರೂಢಿ ಮಾಡಿಕೊಂಡಿರುತ್ತಾರೆ. ಅತೀಯಾದ ಸಕ್ಕರೆ ಸೇವನೆಯಿಂಧ ದೇಹದ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಸಂಶೋಧಕರ ಪ್ರಕಾರ ಸಕ್ಕರೆಯು ಕೂಡ ಕೆಲವೊಂದಕ್ಕೆ ಮದ್ದಂತೆ. ಗಾಯ ಹಾಗೂ ಹುಣ್ಣುಗಳನ್ನು ವಾಸಿ ಮಾಡುತ್ತದೆಯಂತೆ.


ಸಂಶೋಧಕರು ಪ್ರಕಾರ ಸಕ್ಕರೆಯು ವಯಸ್ಸಾದವರಲ್ಲಿ ಮಧುಮೇಹದಿಂದ ಉಂಟಾದ ವಾಸಿಯಾಗದ ಹುಣ್ಣುಗಳು ಮತ್ತು ಗಾಯಗಳನ್ನು ಗುಣಪಡಿಸಲು ಇದು ಉಪಯುಕ್ತವಂತೆ. ಆಂಜಿಯೋಜೆನೆಸಿಸ್ ಎಂಬ ಹೊಸ ರಕ್ತನಾಳ ರಚನೆಯಲ್ಲಿ ಸಕ್ಕರೆಯು ಪ್ರಮುಖ ಪಾತ್ರ ವಹಿಸುತ್ತದೆಯಂತೆ. ರಕ್ತನಾಳಗಳು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪೂರೈಸಲು ದೇಹದಾದ್ಯಂತ ರಕ್ತವನ್ನು ಪೂರೈಸುವುದರಿಂದ, ಗಾಯಗಳ ಗುಣಪಡಿಸುವಿಕೆಯಲ್ಲಿ ಹೊಸ ರಕ್ತನಾಳಗಳ ರಚನೆಯನ್ನು ಅಗತ್ಯತೆಯನ್ನು ಮನಗಂಡ ಸಂಶೋಧಕರು ಇದನ್ನು ಉತ್ತೇಜಿಸಲು ಸಕ್ಕರೆಯನ್ನು ಒಂದು ಹೈಡ್ರೋಜೆಲ್ ಬ್ಯಾಂಡೇಜ್ ಗೆ ಸೇರಿಸಿ ಪ್ರಯೋಗ ಮಾಡಿದ್ದಾರೆ. 


ಹೊಸದಾಗಿ ಬಳಸಲಾದ ಸಕ್ಕರೆಯು ವಯಸ್ಸು, ದುರ್ಬಲ ರಕ್ತ ಪೂರೈಕೆ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಗುಣವಾಗದ ಚರ್ಮದ ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯ ರಕ್ಷಣೆ ಒದಗಿಸುವವರಿಗೆ ಆರ್ಥಿಕವಾಗಿ ಲಾಭದಾಯಕವೆಂದು ಸಂಶೋಧಕರು ತಿಳಿಸಿದ್ದಾರೆ.


ಒಳ್ಳೆಯದು ಎಂದು ಅತೀಯಾಗಿ ಸೇವಿಸಿ. ಅತೀಯಾದರೆ ಅಮೃತವು ವಿಷ.ಹಿತ ಮಿತವಾಗಿ ಸೇವಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಅಂದ ಹೆಚ್ಚಾಗಬೇಕೆ ದಾಳಿಂಬೆ ಸಿಪ್ಪೆ ಬಳಸಿ!