Publish Date: Thu, 08 Mar 2018 (11:25 IST)
Updated Date: Thu, 08 Mar 2018 (11:31 IST)
ಬೆಂಗಳೂರು: ಆಲೂಗಡ್ಡೆ ತಿಂದರೆ ದಪ್ಪಗಾಗುತ್ತೇವೆ, ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಆಲೂಗಡ್ಡೆಯನ್ನು ಸೇವಿಸುವುದಕ್ಕೆ ಸಾಕಷ್ಟು ಜನ ಹಿಂದೆ ಮುಂದೆ ನೋಡುತ್ತಾರೆ.
ಆದರೆ ಆಲೂಗಡ್ಡೆ ಸೇವನೆಯಿಂದ ದೇಹಕ್ಕೆ ಬೇಕಾದ ಸಾಕಷ್ಟು ಪ್ರಯೋಜನವಿದೆಯಂತೆ. ಇದರ ಕುರಿತು ಒಂದಷ್ಟು ಮಾಹಿತಿ ಇದೆ ನೋಡಿ.
ಆಲೂಗಡ್ಡೆ ಉತ್ತಮ ಪೌಷ್ಠಿಕಾಂಶದ ಆಹಾರ. ಇದರಲ್ಲಿರುವ ಕಾರ್ಬೋಹೈಡ್ರೇಟ್ ದೇಹದಲ್ಲಿ ಸಕ್ಕರೆಯಂಶ ಇದ್ದಕ್ಕಿದ್ದಂತೆ ಹೆಚ್ಚಾಗುವುದನ್ನು ತಡೆಯಲು ಸಹಕರಿಸುತ್ತದೆ.
ಇನ್ನು ಆಲೂಗಡ್ಡೆಯ ಸಿಪ್ಪೆ ತೆಗೆದು ಮಾಡುವ ಅಡುಗೆಗೆ ಬಳಸುವುದಕ್ಕಿಂತ ಸಿಪ್ಪೆ ಸಹಿತ ತಯಾರಿಸಿದ ಆಹಾರ ತುಂಬಾ ಆರೋಗ್ಯಕರ. ಸಿಪ್ಪೆಯಲ್ಲಿರುವ ನಾರಿನಂಶ ದೇಹಕ್ಕೆ ತುಂಬಾ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ