Select Your Language

Notifications

webdunia
webdunia
webdunia
webdunia

ನಿಮ್ಮ ಮೂಳೆ ಗಟ್ಟಿ ಮುಟ್ಟಾಗಬೇಕೆ…? ಈ ಆಹಾರ ಸೇವಿಸಿ

ನಿಮ್ಮ ಮೂಳೆ ಗಟ್ಟಿ ಮುಟ್ಟಾಗಬೇಕೆ…? ಈ ಆಹಾರ ಸೇವಿಸಿ
ಬೆಂಗಳೂರು , ಬುಧವಾರ, 7 ಮಾರ್ಚ್ 2018 (07:19 IST)
ಬೆಂಗಳೂರು: ಈಗ ಸಾಮಾನ್ಯವಾಗಿ ಎಲ್ಲರಿಗೂ ಬೆನ್ನು ನೋವು, ಸೊಂಟ ನೋವು, ಮೊಣ ಕೈ ನೋವು, ಹೀಗೆ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ಇವಕ್ಕೆಲ್ಲಾ ಮುಖ್ಯ ಕಾರಣ ಜೀವನಶೈಲಿ ಹಾಗೂ ಆಹಾರಕ್ರಮ. ಆದರೆ ಚಿಕ್ಕವಯಸ್ಸಿನಲ್ಲಿಯೇ ಮೂಳೆಗಳ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿದರೆ ವಯಸ್ಸಾದಾಗ ಮೂಳೆ ಸಂಬಂಧಿ ಕಾಯಿಲೆಗಳು ಕಂಡು ಬರುವುದು ಕಡಿಮೆಯಾಗುತ್ತದೆ. ಮೂಳೆಗಳು ಗಟ್ಟಿಮುಟ್ಟಾಗಿ ಇದ್ದರೆ ಮಾತ್ರ ದೇಹ ಗಟ್ಟಿಮುಟ್ಟಾಗಿರಲು ಸಾಧ್ಯ.
ಮೂಳೆಗಳ ಆರೋಗ್ಯ ಕಾಪಾಡಲು ಕೆಲವೊಂದು ಸರಳವಾದ ಸೂಪರ್ ಟಿಪ್ಸ್ ಇಲ್ಲಿದೆ.


ಗಾಢ ಹಸಿರು ಬಣ್ಣದ ತರಕಾರಿ ಸೇವಿಸಿ: ಗಾಢ ಹಸಿರು ಬಣ್ಣದ ತರಕಾರಿ ಹಾಗೂ ಸೊಪ್ಪು: ಗಾಢ ಹಸಿರು ಬಣ್ಣದ ತರಕಾರಿಗಳಲ್ಲಿ ವಿಟಮಿನ್ ಡಿ ಅಂಶವಿರುವುದರಿಂದ ಇವುಗಳನ್ನು ಪ್ರತಿನಿತ್ಯದ ಆಹಾರಕ್ರಮದಲ್ಲಿ ಸೇರಿಸಿದರೆ ಮೂಳೆಯ ಆರೋಗ್ಯ ಹೆಚ್ಚಿಸಿಕೊಳ್ಳಬಹುದು.

ಈರುಳ್ಳಿ ಸೇವನೆ: ಮೂಳೆಗಳ ಆರೋಗ್ಯಕ್ಕೆ ಸಲ್ಫರ್ ಕೂಡ ಅವಶ್ಯಕ. ಈ ಸಲ್ಫರ್ ಅಂಶ ಈರುಳ್ಳಿ ಹಾಗೂ ಬೆಳ್ಳುಳ್ಳಿಯಲ್ಲಿ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಹಾಲು ಕುಡಿಯಿರಿ: ಹಾಲಿನಲ್ಲಿ ಪೊಟಾಷ್ಯಿಯಂ, ರಂಜಕ ಹಾಗೂ ಕ್ಯಾಲ್ಸಿಯಂ ಇದೆ. ಈ ಅಂಶಗಳು ಮೂಳೆಯ ಆರೋಗ್ಯಕ್ಕೆ ತುಂಬಾ ಅವಶ್ಯಕ. ಆದ್ದರಿಂದ ದಿನದಲ್ಲಿ ಒಂದು ಲೋಟ ಹಾಲು ಕುಡಿಯುವುದು ಒಳ್ಳೆಯದು.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಗಳೆಯರೇ ಗುಲಾಬಿ ರಂಗಿನ ತುಟಿ ನಿಮ್ಮದಾಗಬೇಕೆ ಇಲ್ಲಿದೆ ನೋಡಿ ಸುಲಭ ಟಿಪ್ಸ್!