Publish Date: Sun, 01 Apr 2018 (14:27 IST)
Updated Date: Sun, 01 Apr 2018 (14:29 IST)
ಮಂಡ್ಯ ಟಿಕೆಟ್ ಆಕಾಂಕ್ಷಿ ಪ್ರಭಾ ನೇತೃತ್ವದಲ್ಲಿ ಜೆಡಿಎಸ್ ಮಹಿಳಾ ಕಾರ್ಯಕರ್ತರಿಂದ ನಡೆಯುತಿದ್ದ ರ್ಯಾಲಿ ಆಯೋಜಿಸಲಾಗಿತ್ತು. ಆದರೆ, ಅನುಮತಿ ಪಡೆಯದೆ ರ್ಯಾಲಿ ಆಯೋಜಿಸಿದ್ದಕ್ಕಾಗಿ ಚುನಾವಣಾ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಮಂಡ್ಯ ಹೊರವಲಯದ ಉಮ್ಮಡಹಳ್ಳಿ ಗೇಟ್ ನಿಂದ ರ್ಯಾಲಿ ಆರಂಭಿಸಲಾಗಿತ್ತು. ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರ್ಯಾಲಿ ತಡೆಹಿಡಿದ ಪೊಲೀಸರುನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ.
ರ್ಯಾಲಿಯಲ್ಲಿ 300 ಕ್ಕೂ ಹೆಚ್ಚು ಬೈಕ್ ಗಳಲ್ಲಿ ಪಾಲ್ಗೊಂಡಿದ್ದ ಮಹಿಳಾ ಕಾರ್ಯಕರ್ತರು, ರ್ಯಾಲಿಗೆ ಪೊಲೀಸರು ತಡೆಹೊಟ್ಟುತಿದ್ದಂತೆ ಅಲ್ಲಿಂದ ಕಾಲ್ಕಿತ್ತ ಅರ್ಧಕ್ಕೂ ಹೆಚ್ಚು ಕಾರ್ಯಕರ್ತರು ಬೇರೆ ಕಡೆ ಸ್ಥಳಾಂತರಗೊಂಡರು ಎನ್ನಲಾಗಿದೆ.