Select Your Language

Notifications

webdunia
webdunia
webdunia
webdunia

ಖರ್ಗೆ ನಾಯಕರನ್ನು ಬೆಳೆಸುವ ಬದಲಾಗಿ ತುಳಿದಿದ್ದಾರೆ: ಗುತ್ತೇದಾರ್

ಖರ್ಗೆ ನಾಯಕರನ್ನು ಬೆಳೆಸುವ ಬದಲಾಗಿ ತುಳಿದಿದ್ದಾರೆ: ಗುತ್ತೇದಾರ್
ಕಲಬುರಗಿ , ಶನಿವಾರ, 31 ಮಾರ್ಚ್ 2018 (16:04 IST)
ಪ್ರಧಾನಿ ನರೇಂದ್ರ ಮೋದಿ ಬದಲಾವಣೆ ತರಲಿದ್ದಾರೆಂದು ಬಿಜೆಪಿಯನ್ನು ಗೆಲ್ಲಿಸಿದ್ದಿರಿ. 60 ವರುಷ ಕಾಂಗ್ರೆಸ್ ಮಾಡದ ಕೆಲಸ ಮಾಡಲು ಬಂದ ಮೋದಿಗೆ ಬೆಂಬಲ ಕೊಡೋನ. ಹೀಗಂತ ಕಾಂಗ್ರೆಸ್ ಉಚ್ಚಾಟಿತ ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳುವ ಮೂಲಕ ತಾವು ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದಾಗಿ ಹೇಳಿದ್ರು. 
ಕಲಬುರಗಿ ಜಿಲ್ಲೆ ಅಫಜಲಪುರ ಮತಕ್ಷೇತ್ರದ ಸ್ಟೇಷನ್ ಗಾಣಗಾಪುರದಲ್ಲಿ ಹಿತೈಶಿ, ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಅವರು, ಕಾಂಗ್ರೆಸ್ ತಮನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಮಲ್ಲಿಕಾರ್ಜುನ ಖರ್ಗೆ ನಾಯಕರನ್ನು ಬೆಳೆಸುವ ಬದಲಾಗಿ ತುಳಿಯುವ ಕೆಲಸ ಮಾಡಿದ್ದಾರೆ ಎಂದು ದೂರಿದ್ರು. 
 
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಿಜೆಪಿಗೆ ಸೇರ್ಪಡೆಗೊಳ್ಳುವೆ. ಹಲವು ಕಾಂಗ್ರೆಸ್ ಮುಖಂಡರೂ ಬಿಜೆಪಿಗೆ ಸೇರಲಿದ್ದಾರೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್ ಮುಗಿಸುವುದೇ ನನ್ನ ಗುರಿ. ಚಿತ್ತಾಪುರದಲ್ಲಿ ಪ್ರಿಯಾಂಕ ಖರ್ಗೆ ಸೋಲಲಿದ್ದಾರೆ ಎಂದರು. 
 
ನೀವು ಬಿಜೆಪಿಗೆ ಹೋಗು ಅಂದರೆ ಹೋಗತಿನಿ. ಇಲ್ಲಾ ಅಂದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತ ಮಾಲೀಕಯ್ಯ ಹೇಳಿದ್ರು. ಇನ್ನು ನಮ್ಮ ಕುಟುಂಬದ ಸದಸ್ಯರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಹೋದರ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಅವರ ಬೆಂಬಲವೂ ನನಗಿದೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ. ಮತಕ್ಷೇತ್ರದ ಜನರು ಆರು ಬಾರಿ ಆಯ್ಕೆ ಮಾಡಿದ್ದು, ಈ ಬಾರಿಯೂ ಆಶೀರ್ವಾದ ಮಾಡಲಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ ಹೇಳಿದ್ರು. 
 
ಇನ್ನು ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಎಂ.ವೈ.ಪಾಟೀಲ್ ಜತೆ ಬಿ.ಎಸ್.ಯಡಿಯೂರಪ್ಪ ಮತ್ತು ನಾನು ಮಾತಾಡಿದ್ದೇವೆ. ಅವರೂ ಬೆಂಬಲ ನೀಡಿದ್ದಾರೆ. ಇಬ್ಬರು ಸೇರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡ್ತೇವೆ ಅಂತಂದ್ರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನವೇ ಉಚ್ಚಾಟಿಸಿದ್ದು ಸರಿಯಲ್ಲ. ಇದರ ಹಿಂದೆ ಜಿಲ್ಲೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೈವಾಡ ಅಂತ ಆರೋಪಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯಗೆ ಬಿಜೆಪಿ ನಾಯಕರಿಂದಲೇ ಟಾಂಗ್