Select Your Language

Notifications

webdunia
webdunia
webdunia
webdunia

ಸಿಎಂ ರೆಸಾರ್ಟ್‌ನಲ್ಲಿದ್ದು ಹಣ ಹಂಚಲು ಬಂಡಲ್ ಕಟ್ತಿದ್ದಾರೆ: ಕುಮಾರಸ್ವಾಮಿ

ಸಿಎಂ ರೆಸಾರ್ಟ್‌ನಲ್ಲಿದ್ದು ಹಣ ಹಂಚಲು ಬಂಡಲ್ ಕಟ್ತಿದ್ದಾರೆ: ಕುಮಾರಸ್ವಾಮಿ
ದಾವಣಗೆರೆ , ಶನಿವಾರ, 31 ಮಾರ್ಚ್ 2018 (15:38 IST)
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿಗೆ ಭೇಟಿ ನೀಡಿರುವ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ರೆಸಾರ್ಟ್‌ನಲ್ಲಿದ್ದು ಹಣ ಹಂಚಲು ಬಂಡಲ್ ಕಟ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಗಳೂರಿನ ಹೆಲಿಪ್ಯಾಡ್‌ನಲ್ಲಿ  ‌ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿ ಸಿಎಂ ಸಿದ್ದರಾಮಯ್ಯ ರೆಸಾರ್ಟ್ ರಾಜಕೀಯ ಮಾಡ್ತಾ ಇದ್ದಾರೆ.  ರೆಸಾರ್ಟ್‌ನಲ್ಲಿ ಕುಳಿತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಣ ಹಂಚಲು ತಂತ್ರ ರೂಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
 ರೆಸಾರ್ಟ್‌ನಲ್ಲಿ ಕುಳಿತು ಎಲ್ಲೆಲ್ಲಿಗೆ, ಯಾವ ಸ್ಥಳಗಳಿಗೆ ಹಣ ಬಂಡಲ್ ಕಟ್ಟಿ ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೇರೆ ಪಕ್ಷದ ನಾಯಕರನ್ನ ರೆಸಾರ್ಟ್‌ಗೆ ಕರೆಸಿಕೊಂಡು ಹಣ, ಆಮೀಷ ನೀಡಿ ಖರೀದಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಅದ್ಯಾವುದು ನಡೆಯೋದಿಲ್ಲ, ವ್ಯರ್ಥ ಪ್ರಯತ್ನ ಅದು ಸಿದ್ದರಾಮಯ್ಯ ವಿರುದ್ಧ 2 ಸಾವಿರ ಕೋಟಿ ರೂಪಾಯಿ ಹಗರಣದ ಆರೋಪ ಸತ್ಯ ಅವರನ್ನ ರಕ್ಷಿಸಿಕೊಳ್ಳಲು ಕೆಂಪಣ್ಣ ಆಯೋಗ ರಚಿಸಿದ್ದಾರೆ. ಕೆಂಪಣ್ಣ ಆಯೋಗ ರಚನೆಯಾಗಿ ಮೂರು ವರ್ಷ ಆಯ್ತು ಕೆಂಪಣ್ಣ ಆಯೋಗ ಏನು ವರದಿ ಕೊಟ್ಟಿದೆ ಅನ್ನೋದು ಯಾರಿಗೂ ಗೊತ್ತಿಲ್ಲ ಸ್ವಲ್ಪ ದಿನದಲ್ಲೇ ಹೊಸ ಸರ್ಕಾರ ಬರುತ್ತದೆ ಹೊಸ ಸರ್ಕಾರ ಬಂದ್ಮೇಲೆ ಸತ್ಯಾಂಶ ಹೊರ ಬರಲಿದೆ ಎಂದು ಗುಡುಗಿದರು.
 
ಅಮಿತ್ ಷಾ ಮೂರು ಜಿಲ್ಲೆಗಳ ಪ್ರವಾಸದಿಂದ ಜೆಡಿಎಸ್‌ಗೆ ಯಾವುದೇ ಎಫೆಕ್ಟ್ ಆಗೋದಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಹುಮತ ಪಡೆದು ಸರಕಾರ ರಚಿಸುವುದು ಖಚಿತ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಮುಖಂಡರಿಗೆ ಚಪ್ಪಲಿ ಎಸೆಯುವ ಬೆದರಿಕೆ ಹಾಕಿದ ಹುಲಕೋಟಿ ಗ್ರಾಮಸ್ಥರು