Publish Date: Sat, 31 Mar 2018 (15:25 IST)
Updated Date: Sat, 31 Mar 2018 (15:26 IST)
ಮೇಲುಕೋಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ನೀಡಿ ಇಂದು ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು.
ಕರ್ನಾಟಕ ಭೇಟಿ ಸಂದರ್ಭದಲ್ಲಿ ಹಿಂದೂ ದೇವಾಲಯಗಳಿಗೆ ಭೇಟಿ ಕೊಡುತ್ತಿರುವ ಷಾ, ಮಂಡ್ಯ ಜಿಲ್ಲೆ ಭೇಟಿ ಸಂದರ್ಭದಲ್ಲೂ ಮುಂದುವರೆದ ಷಾ ಟೆಂಪಲ್ ರನ್ ಮುಂದುವರಿಸಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿರುವ ಮೇಲುಕೋಟೆ ಕರ್ನಾಟಕದ ಪ್ರತಿಷ್ಟಿತ ದೇವಾಲಯವಾಗಿದ್ದು ಲಕ್ಷಾಂತರ ಭಕ್ತರನ್ನು ಹೊಂದಿದೆ.
ಅಮಿತ್ ಷಾಗೆ ಕೇಂದ್ರ ಸಚಿವ ಅನಂತ್ ಕುಮಾರ್ ಬಿಜೆಪಿ ಮುಖಂಡರಾದ ಸಂತೋಷ್, ಆರ್.ಅಶೋಕ್, ಸಿ.ಟಿ.ರವಿ, ತೇಜಸ್ವಿನಿ ಸಾಥ್ ನೀಡಿದರು.