Publish Date: Sat, 31 Mar 2018 (15:55 IST)
Updated Date: Sat, 31 Mar 2018 (15:56 IST)
ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಹೊನ್ನಾಳಿ ಕ್ಷೇತ್ರದ ಬಿಜೆಪಿ ಮುಖಂಡರಾದ ಡಾ.ಡಿ.ಜಿ.ಗಂಗಪ್ಪ ಬಿಜೆಪಿ ಟಿಕೇಟ್ ಕೇಳಲು ಮುಂದಾಗಿರುವುದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕರಾದ ಡಿ.ಜಿ. ಗಂಗಪ್ಪ ಈ ಬಾರಿ ಬಿಜೆಪಿಯಿಂದ ಟಿಕೆಟ್ ಪಡೆದು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವ ತಮ್ಮ ಬಯಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂದಿಟ್ಟಿದ್ದಾರೆ.
ಬೆಂಬಲಿಗರೊಂದಿಗೆ ಶಿಕಾರಿಪುರದಲ್ಲಿ ಬಿಡುಬಿಟ್ಟ ಗಂಗಪ್ಪ.ಮಾಜಿ ಸಿಎಂ ಬಿಎಸ್ ವೈ ಮನವೊಲಿಸುವ ಶತ ಪ್ರಯತ್ನ. ಪಕ್ಷದ ಕಾರ್ಯಕರ್ತರನ್ನ ನಿರ್ಲಕ್ಷಿಸಿದ್ದಾರೆ ಎಂದು ಮಾಜಿ ಶಾಸಕ ಗಂಗಪ್ಪ, ತಮ್ಮದೇ ಪಕ್ಷದ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ಧ ಆರೋಪಿಸಿದ್ದಾರೆ.