Publish Date: Sun, 01 Apr 2018 (14:12 IST)
Updated Date: Sun, 01 Apr 2018 (14:14 IST)
ಖ್ಯಾತ ಸ್ವಾಮಿಜಿಗಳಿಗೆ ಟಿಕೆಟ್ ನೀಡಿ ಹೆಚ್ಚು ಸ್ಥಾನ ಗೆಲ್ಲಬೇಕು ಎನ್ನುವ ಚಿಂತನೆಯಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಣತಂತ್ರಕ್ಕೆ ಕೆಲ ಸ್ವಾಮಿಜಿಗಳು ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಗ್ರಾಮದ ರಾಮಾರೂಢ ಮಠದ ಪರಮ ರಾಮಾರೂಢ ಸ್ವಾಮೀಜಿ.ಬಿಜೆಪಿ ಚಾಣಾಕ್ಯ ಅಮಿತ್ ಶಾ ಭೇಟಿಯಾಗಲು ಮುಂದಾಗಿ ಈಗಲೂ ತಾನು ಬಿಜೆಪಿ ಆಕಾಂಕ್ಷಿ ಎಂದ ಹೇಳಿದ್ದಾರೆ.
ನಿರಂತರ 6 ತಿಂಗಳ ಕಾಲ ಬೀಳಗಿ ಮತಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ.ಈಗ ಮತ್ತೆ ಬಿಜೆಪಿ ಸ್ವಾಮೀಜಿಗಳಿಗೆ ಟಿಕೆಟ್ ನೀಡಲು ಮುಂದಾಗಿರೋ ಹಿನ್ನೆಲೆ ಮನವಿಗೆ ನಿಧಾ೯ರ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಒಂದು ವಾರಗಳ ಕಾಲ ಬಿಜೆಪಿ ನಡೆಯನ್ನು ಕಾದು ನೋಡುವ ತಂತ್ರ ಅನುಸರಿಸಿ, ಬಿಜೆಪಿ ಟಿಕೆಟ್ ನೀಡದೇ ಹೋದ್ರೆ ಪಕ್ಷೇತರ ಅಭ್ಯಥಿ೯ಯಾಗಿ ಸ್ಫರ್ಧಿಸುತ್ತೇನೆ ಎಂದು ಪರೋಕ್ಷವಾಗಿ ಸವಾಲ್ ಹಾಕಿದ್ದಾರೆ.
ಜೆಡಿಎಸ್, ಕಾಂಗ್ರೆಸ್ ಗೆ ಹೋಗಲ್ಲ, ಬಿಜೆಪಿಯಿಂದ ಮಾತ್ರ ಕಾಯುತ್ತೇವೆ. ಎಪ್ರಿಲ್ 3 ಕ್ಕೆ ಬಾಗಲಕೋಟೆ ಜಿಲ್ಲೆಗೆ ಆಗಮಿಸೋ ಅಮಿತ್ ಶಾ ಭೇಟಿ ವೇಳೆ ಟಿಕೆಟ್ ನೀಡುವಂತೆ ಮನವಿ ಮಾಡಲು ನಿಧ೯ರಿಸಿದ್ದೇನೆ ಎಂದರು.