Publish Date: Sun, 01 Apr 2018 (04:56 IST)
Updated Date: Sun, 01 Apr 2018 (04:59 IST)
ಬೆಂಗಳೂರು: ಚುನಾವಣೆಗೆ ಇನ್ನೇನು ಕೆಲವೇ ದಿನಗಳಿವೆ. ಹಾಗಿದ್ದರೂ ಬಿಜೆಪಿ ಟಿಕೆಟ್ ಯಾರಿಗೂ ಫೈನಲ್ ಆಗಿಲ್ಲ. ಬಿಎಸ್ ಯಡಿಯೂರಪ್ಪ ಬಿಟ್ಟು ಬೇರೆ ಶಾಸಕರಿಗೆ ಇನ್ನೂ ಟಿಕೆಟ್ ಭರವಸೆ ಸಿಕ್ಕಿಲ್ಲ.
ಇನ್ನೂ ಬೇರೆ ಪಕ್ಷದಿಂದ ಬಿಜೆಪಿಗೆ ಬರುವವರಿದ್ದಾರೆ. ಹೀಗಾಗಿ ಎಲ್ಲರೂ ಬಂದ ಮೇಲೆ ಏಪ್ರಿಲ್ 4,5 ಮತ್ತು 7 ರಂದು ಬೆಂಗಳೂರಿನಲ್ಲಿ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಟಿಕೆಟ್ ಹಂಚಿಕೆ ಫೈನಲ್ ಮಾಡಲಾಗುವುದು ಎನ್ನಲಾಗಿದೆ.
ಬಿಜೆಪಿ ಟಿಕೆಟ್ ಕೊಡುವುದಕ್ಕೆ ಮೊದಲು ಎಲ್ಲಾ ಕ್ಷೇತ್ರವಾರು ವರದಿಯನ್ನು ರಾಜ್ಯ ಘಟಕ ಹೈಕಮಾಂಡ್ ಗೆ ಒಪ್ಪಿಸಲಿದೆ. ಈ ವರದಿ ಆಧಾರದಲ್ಲಿಯೇ ಯಾರು ಗೆಲ್ಲುವ ಅರ್ಹರಿರುತ್ತಾರೋ ಅವರಿಗೆ ಮಾತ್ರ ಟಿಕೆಟ್ ಎನ್ನಲಾಗಿದೆ.ಹೀಗಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಆತಂಕದಲ್ಲೇ ಇದ್ದಾರೆ. ಇದಕ್ಕೆಲ್ಲಾ ಈ ವಾರಾಂತ್ಯಕ್ಕೆ ಉತ್ತರ ಸಿಗುವ ನಿರೀಕ್ಷೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ