Publish Date: Sun, 01 Apr 2018 (14:23 IST)
Updated Date: Sun, 01 Apr 2018 (14:24 IST)
ಕೊಪ್ಪಳದ ಕಾಂಗ್ರೇಸಿನ ಪ್ರಭಾವಿ ಮುಖಂಡ ಹಾಗೂ ಕುರುಬ ಸಮುದಾಯದ ಪ್ರಭಾವಿ ನಾಯಕ ಮಾಜಿಸಚಿವ ಸಾಲೋಣಿ ನಾಗಪ್ಪ ಇದೀಗ ಬಿಜೆಪಿ ಸೆರ್ಪಡೆಯಾಗಲು ವೇದಿಕೆ ಸಿದ್ದವಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಕೊಪ್ಪಳದ ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ಬಿಜೆಪಿ ನಾಯಕರು ಸಾಲೋಣಿ ನಾಗಪ್ಪರವರ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಸಾಲೋಣಿ ನಾಗಪ್ಪ ಸಹ ಸಹಮತ ವ್ಯಕ್ತಪಡಿಸಿದ್ದು, ಇದೇ 5 ಅಥವಾ 6 ತಾರೀಖಿನಂದು ಬಿಜೆಪಿ ಸೆರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಇನ್ನು ಕನಕಗಿರಿ ಕ್ಷೇತ್ರದಲ್ಲಿ ಕುರುಬ ಸಮುದಾಯ ಮತಗಳು ಅತಿಹೆಚ್ಚು ಇರೋದ್ರಿಂದ ಒಂದು ವೇಳೆ ಸಾಲೋಣಿ ನಾಗಪ್ಪ ಬಿಜೆಪಿ ಸೆರ್ಪಡೆಯಾದ್ರೆ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಕೊಡಲಿದೆ. ಸಾಲೋಣಿ ನಾಗಪ್ಪ ಬಿಜೆಪಿಗೆ ಆಗಮನದಿಂದ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಂಡಿದ್ದು, ಬಿಜೆಪಿ ಅಭ್ಯರ್ಥಿ ದಡೆಸೂಗೂರು ಬಸವರಾಜಗೆ ಪ್ಲಸ್ ಪಾಯಿಂಟ್ ಆಗಲಿದೆ.
ಸಾಲೋಣಿ ನಾಗಪ್ಪ ಕೆಲದಿನಗಳಿಂದ ಶಾಸಕ ಶಿವರಾಜ ತಂಗಡಗಿ ವಿರುದ್ದ ಅಸಮಾಧಾನಗೊಂಡಿದ್ರು. ಇದ್ರಿಂದ ಸಹಜವಾಗಿಯೇ ಶಾಸಕ ಶಿವರಾಜ್ ತಂಗಡಗಿಗೆ ತಲೆನೋವಾಗಿ ಪರಿಣಮಿಸಲಿದೆ.