ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಅಮೆಜಾನ್ ಇಂಡಿಯಾದ ಸದ್ಯದ ಸ್ಥಿತಿಯನ್ನು ಉದ್ಯೋಗಿಯೊಬ್ಬರು ವಿವರಿಸುವ ಪೋಸ್ಟ್ ವೈರಲ್ ಆಗಿದೆ.
ನನ್ನ ತಂಡದ ಶೇ.75 ರಷ್ಟು ಸದಸ್ಯರನ್ನು ತೆಗೆಯಲಾಗಿದೆ. ನಾನು ಸೇರಿದಂತೆ ತಂಡದಲ್ಲಿ ಶೇ.25 ಮಂದಿ ಇದ್ದಾರೆ. ಕ್ಯಾಬಿನ್ನಲ್ಲಿ ಕುಳಿತಿರುವಾಗಲೇ ಕೆಲಸದಿಂದ ತೆಗೆಯುತ್ತಿದ್ದಾರೆ.
ವಜಾಗೊಂಡ ಸುದ್ದಿ ಕೇಳಿ ಅವರು ಕ್ಯಾಬಿನ್ನಲ್ಲೇ ಕಣ್ಣೀರಿಟ್ಟಿದ್ದಾರೆ. ನನಗೆ ಇನ್ನು ಮುಂದೆ ಕೆಲಸ ಮಾಡಲು ಯಾವುದೇ ಉತ್ಸಾಹ ಇಲ್ಲ ಎಂದು ಬರೆದಿದ್ದಾರೆ.
ಗುರುಗ್ರಾಮ ಮತ್ತು ಬೆಂಗಳೂರಿನ ಕಚೇರಿಗಳಲ್ಲಿ ವಜಾ ಪ್ರಕ್ರಿಯೆ ನಡೆಯುತ್ತಿರುವುದರಿಂದ ಇದು ಭಾರತದ ಹಲವಾರು ವಿಭಾಗಗಳ ಮೇಲೆ ಪರಿಣಾಮ ಬೀರಿದೆ. ವಜಾಗೊಳಿಸಿದ ಉದ್ಯೋಗಿಗಳಿಗೆ 5 ತಿಂಗಳ ವೇತನವನ್ನು ಅಮೆಜಾನ್ ಪಾವತಿ ಮಾಡಿದೆ.