ಬೆಂಗಳೂರು : ಆನ್ಲೈನ್ ಶಾಪಿಂಗ್ ದಿಗ್ಗಜ ಅಮೆಜಾನ್ ಕಂಪನಿಯಲ್ಲಿ ಉದ್ಯೋಗ ಕಡಿತ ಆರಂಭಗೊಂಡಿದ್ದು ಉದ್ಯೋಗಿಗಳು ಕಣ್ಣೀರಿಟ್ಟು ಕಂಪನಿಯನ್ನು ತೊರೆದಿದ್ದಾರೆ.
ವಿಶ್ವಾದ್ಯಂತ 18 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಅಮೆಜಾನ್ ಮುಂದಾಗಿದ್ದು, ಭಾರತದಲ್ಲಿ ಕನಿಷ್ಠ 1 ಸಾವಿರ ಉದ್ಯೋಗಿಗಳನ್ನು ಮನೆಗೆ ಹೋಗಲಿದ್ದಾರೆ.
ಈ ತಿಂಗಳು ಸುಮಾರು 1,000 ಉದ್ಯೋಗಿಗಳನ್ನು ವಜಾ ಮಾಡುವ ನಿರೀಕ್ಷೆಯಿದೆ ಮತ್ತು ಈಗಾಗಲೇ ವಜಾಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.
ಟೆಕ್ ಮತ್ತು ಮಾನವ ಸಂಪನ್ಮೂಲ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡತ್ತಿರುವ ಉದ್ಯೋಗಿಗಳಿಗೆ ಈಗಾಗಲೇ ಮೇಲ್ ಬಂದಿದೆ.