Publish Date: Mon, 09 Jan 2023 (12:52 IST)
Updated Date: Mon, 09 Jan 2023 (12:20 IST)
ವಾಷಿಂಗ್ಟನ್ : ಇ-ಕಾಮರ್ಸ್ ಕಂಪನಿ ಅಮೆಜಾನ್ ತನ್ನ ಉದ್ಯೋಗಿಗಳಿಗೆ ಆಘಾತಕರ ಸುದ್ದಿ ನೀಡಿದೆ. ಕಂಪನಿ ಬರೋಬ್ಬರಿ 18,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿದೆ.
ಕಂಪನಿ ಕಳೆದ ವರ್ಷ ನವೆಂಬರ್ನಲ್ಲಿ ತನ್ನ ಸುಮಾರು 10,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ತಿಳಿಸಿತ್ತು. ಆದರೆ ಈ ಹಿಂದೆ ಯೋಜಿಸಿದಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗುತ್ತಿದೆ.
ಅನಿಶ್ಚಿತ ಆರ್ಥಿಕತೆ ಹಾಗೂ ಕೋವಿಡ್ ಸಂದರ್ಭದಲ್ಲಿ ಮಾಡಿಕೊಂಡಿದ್ದ ಅಧಿಕ ನೇಮಕಾತಿ ಅಂಶವನ್ನು ಉಲ್ಲೇಖಿಸಿ ಅಮೆಜಾನ್ ಉದ್ಯೋಗಿಗಳ ವಜಾ ನಿರ್ಧಾರವನ್ನು ಕೈಗೊಂಡಿದೆ.
ನವೆಂಬರ್ನಲ್ಲಿ ಮಾಡಿಕೊಂಡಿದ್ದ ಕಡತವನ್ನು ಇಂದು ನಾವು ಹಂಚಿಕೊಳ್ಳುತ್ತಿದ್ದೇವೆ, ಕಂಪನಿಯಿಂದ 18,000 ಉದ್ಯೋಗಿಗಳನ್ನು ತೆಗೆದುಹಾಕುತ್ತಿದ್ದೇವೆ ಎಂದು ಸಿಇಒ ಆಂಡಿ ಜಾಸ್ಸಿ ಬುಧವಾರ ತಿಳಿಸಿರುವುದಾಗಿ ವರದಿಯಾಗಿದೆ.