ಬೆಂಗಳೂರು : ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರೈ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಗಲ್ಫ್ ನ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಭಾಗಿಯಾಗಿದ್ದ ಪ್ರಕಾಶ್ ರೈ ಅವರು ಶಬರಿ ಮಲೆ ದೇಗುಲದ ವಿವಾದ ಬಗ್ಗೆ ಮಾತನಾಡಿ, ‘ಹೆಣ್ಣು ಅಂದ್ರೆ ತಾಯಿ, ಭೂಮಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ. ಅದೇ ಹೆಣ್ಣಿನಿಂದ ಎಲ್ಲರೂ ಜನ್ಮ ತಾಳುತ್ತೇವೆ. ಆದರೆ ಅದೇ ಹೆಣ್ಣನ್ನು ಪೂಜೆಯಿಂದ ಹೊರಗಿಡೋದು ಎಷ್ಟು ಸರಿ ಅದರ ಅರ್ಥವೇನು? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ‘ಯಾವ ಭಕ್ತರು ಸ್ತ್ರೀಯರಿಗೆ ದೇವರ ದರ್ಶನಕ್ಕೆ ಅವಕಾಶ ಕೊಡುವುದಿಲ್ಲವೋ ಅವರು ಭಕ್ತರೇ ಅಲ್ಲ. ಯಾವ ದೇವರು ಮಹಿಳೆಯನ್ನು ನೋಡೋದಿಲ್ಲವೋ ಅದು ದೇವರೇ ಅಲ್ಲ. ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ, ದೇವರ ದರ್ಶನಕ್ಕೆ ಅವಕಾಶ ಕೊಡಲೇಬೇಕು. ಮಹಿಳೆಯರನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಅವರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.