Select Your Language

Notifications

webdunia
webdunia
webdunia
webdunia

ಮತ್ತೆ ತೆರೆಯಲಿದೆ ಶಬರಿಮಲೆ ದೇವಾಲಯ: ಮಹಿಳೆಯರಿಗೆ ಪ್ರವೇಶ ಸಿಗುತ್ತಾ?

ಮತ್ತೆ ತೆರೆಯಲಿದೆ ಶಬರಿಮಲೆ ದೇವಾಲಯ: ಮಹಿಳೆಯರಿಗೆ ಪ್ರವೇಶ ಸಿಗುತ್ತಾ?
ತಿರುವನಂತಪುರಂ , ಭಾನುವಾರ, 4 ನವೆಂಬರ್ 2018 (09:19 IST)
ತಿರುವನಂತಪುರಂ: 10-50 ವರ್ಷದೊಳಗಿನ ಮಹಿಳೆಯರೂ ಶಬರಿಮಲೆ ದೇವಾಲಯ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಇದು ಎರಡನೇ ಬಾರಿ ದೇವಾಲಯ ಭಕ್ತರಿಗೆ ತೆರೆದುಕೊಳ್ಳುತ್ತಿದೆ.

ನವಂಬರ್ 5 ರಿಂದ ಮತ್ತೆ ದೇವಾಲಯ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದ್ದು, ಕಳೆದ ಬಾರಿಯಂತೆ ಮತ್ತೆ ಮಹಿಳೆಯರ ಪ್ರವೇಶದ ಪ್ರಹಸನಗಳು ನಡೆಯುವ ಸಾಧ್ಯತೆಯಿದೆ. ಸುಪ್ರೀಂಕೋರ್ಟ್ ಆದೇಶದ ಬಳಿಕ ಕಳೆದ ತಿಂಗಳು ಮೊದಲ ಬಾರಿಗೆ ದೇವಾಲಯ ತೆರೆದಾಗ ಪ್ರತಿಭಟನಾಕಾರರ ವಿರೋಧದಿಂದಾಗಿ ಮಹಿಳೆಯರಿಗೆ ಪ್ರವೇಶ ಸಾಧ್ಯವಾಗಲಿಲ್ಲ.

ಈ ಬಾರಿ ಮತ್ತೆ ನವಂಬರ್ 5 ರಿಂದ ದೇವಾಲಯ ಪ್ರವೇಶಕ್ಕೆ ಮುಕ್ತವಾಗಲಿದ್ದು, ಮಹಿಳೆಯರಿಗೆ ಭದ್ರತೆ ಒದಗಿಸಲು ಕೇರಳ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ದೇವಾಲಯಕ್ಕೆ 5 ಸಾವಿರ ಮಂದಿ ಪೊಲೀಸರ ಭದ್ರತೆ ಒದಗಿಸಿದೆ. ಜತೆಗೆ ಕೆಲವು ಹಿಂದೂ ಸಂಘಟನೆಗಳು ಸೇರಿದಂತೆ ಮಹಿಳೆಯರ ಪ್ರವೇಸಕ್ಕೆ ವಿರೋಧ ಮಾಡುತ್ತಿರುವ ಪ್ರತಿಭಟನಾಕಾರರೂ ಮತ್ತೆ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಹೀಗಾಗಿ ಮತ್ತೊಮ್ಮೆ ಶಬರಿಮಲೆ ಹೈಡ್ರಾಮಾ ಕೇಂದ್ರ ಬಿಂದುವಾಗಲಿರುವುದು ನಿಜ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ಆರು ತಿಂಗಳಿಗೇ ವಿಚ್ಛೇದನ ಕೊಟ್ಟ ಬಗ್ಗೆ ಲಾಲೂ ಪುತ್ರ ಹೇಳಿದ್ದೇನು ಗೊತ್ತಾ?