ತಿರುವನಂತಪುರಂ: ನಾಳೆಯಿಂದ ಶಬರಿಮಲೆ ದೇವಾಲಯ ಮತ್ತೆ ತೆರೆದುಕೊಳ್ಳುತ್ತಿದ್ದು, ಮತ್ತೊಂದು ಸುತ್ತಿನ ವಿವಾದಕ್ಕೆ ಸಜ್ಜಾಗಿದೆ.
ಸುಪ್ರೀಂಕೋರ್ಟ್ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೂ ಪ್ರವೇಶ ಕಲ್ಪಿಸಬೇಕೆಂದು ಆದೇಶಿಸಿದ ಮೇಲೆ ಇದು ಎರಡನೇ ಬಾರಿ ಭಕ್ತರಿಗಾಗಿ ದೇವಾಲಯ ತೆರೆದುಕೊಳ್ಳುತ್ತಿದೆ. ಕಳೆದ ಬಾರಿ ಮಹಿಳೆಯರು ಪ್ರವೇಶಿಸಲು ಯತ್ನಿಸಿದರೂ ಪ್ರತಿಭಟನಾಕಾರರು ಅವರನ್ನು ಮರಳಿ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಸಾಕಷ್ಟು ಹಿಂಸಾಚಾರಗಳೂ ನಡೆದಿತ್ತು.
ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಪರ ವಿರೋಧಿ ಸಂಘಟನೆಗಳು ಸಿದ್ಧವಾಗಿದೆ. ಈ ನಡುವೆ ಮಹಿಳಾ ಪತ್ರಕರ್ತರನ್ನು ದೇವಾಲಯದ ಸ್ಥಿತಿ ಗತಿ ವರದಿ ಮಾಡಲು ರವಾನಿಸಬೇಡಿ ಎಂದು ಕೆಲವು ಹಿಂದೂ ಸಂಘಟನೆಗಳು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿವೆ. ವರದಿ ಮಾಡುವ ನೆಪದಲ್ಲಿ ಮಹಿಳೆಯರು ಬರುವದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗುತ್ತದೆ ಎಂದು ವಿಎಚ್ ಪಿ ಸಂಘಟನೆ, ಹಿಂದೂ ಐಕ್ಯವೇದಿ ಸಂಘಟನೆಯ ನಾಯಕರು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.