ಐತಿಹಾಸ ಪ್ರಸಿದ್ಧವಾದ ಶಬರಿಮಲೆ ದೇವಸ್ಥಾನ ನ.5ರಂದು ಮತ್ತೆ ಬಾಗಿಲು ತೆರೆಯಲಿದೆ.
10 ರಿಂದ 50 ವರ್ಷದ ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶ ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ ನೀಡಿರುವ ತೀರ್ಪಿನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಶಬರಿಮಲೆ ದೇವಾಲಯ ಬಾಗಿಲು ತೆರೆಯಲು ವೇದಿಕೆ ಸಜ್ಜುಗೊಂಡಿದೆ.
ಸುಪ್ರೀಂಕೋರ್ಟ ತೀರ್ಪಿನ ವಿರುದ್ಧ ಉಗ್ರ ಪ್ರತಿಭಟನೆ, ಹಿಂಸಾಚಾರ ನಡೆದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ.
ಪಂಪ, ಶಬರಿಮಲೆ ದೇವಾಲಯ, ನಿಲಾಕ್ಕಲ್ ಮತ್ತು ಇಳುವಂಗಲ್ ನಲ್ಲಿ ಇಷೇದಾಜ್ಱಎ ಜಾರಿಗೊಳಿಸಲಾಗಿದೆ.
ಭಾರೀ ಬಿಗಿ ಭದ್ರತೆ ನಡುವೆ 12ಕ್ಕೂ ಮಹಿಳೆಯರು ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲು ಯತ್ನಿಸಿದ್ದರು. ಆದರೆ ಭಕ್ತರು ಯತ್ನವನ್ನು ವಿಫಲಗೊಳಿಸಿದ್ದರು.