Publish Date: Mon, 22 Oct 2018 (09:00 IST)
Updated Date: Mon, 22 Oct 2018 (09:01 IST)
ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆಗಳಾಗುತ್ತಿರುವ ಬೆನ್ನಲ್ಲೇ ಮತ್ತಿಬ್ಬರು ಮಹಿಳೆಯರು ದೇಗುಲ ಪ್ರವೇಶಿಸುವುದನ್ನು ತಡೆ ಹಿಡಿಯಲಾಗಿದೆ.
ಆಂಧ್ರಪ್ರದೇಶ ಮೂಲದ ಇಬ್ಬರು ಮಹಿಳೆಯರು ನಿನ್ನೆ ದೇವಾಲಯ ಪ್ರವೇಶಿಸಲು ಯತ್ನಿಸಿದ್ದು, ಪ್ರತಿಭಟನಾಕಾರರು ಅವರನ್ನು ತಡೆಹಿಡಿದಿದ್ದಾರೆ. ಬಳಿಕ ಪೊಲೀಸರು ಇವರನ್ನು ಸುರಕ್ಷಿತವಾಗಿ ಕಂಟ್ರೋಲ್ ರೂಂಗೆ ಕರೆದೊಯ್ದಿದ್ದಾರೆ.
ಸುಮಾರು 40 ವರ್ಷ ಆಸುಪಾಸಿನ ಇಬ್ಬರು ಮಹಿಳೆಯರು ದೇವಾಲಯದ ಮೆಟ್ಟಿಲುಗಳವರೆಗೆ ತಲುಪಿದ್ದರು. ಆದರೆ ಪ್ರತಿಭಟನಾಕಾರರು ಅವರನ್ನು ಅಲ್ಲಿಯೇ ತಡೆಹಿಡಿದಿದ್ದಾರೆ. ಈ ಸಂದರ್ಭದಲ್ಲಿ ನಮಗೆ ದೇವಾಲಯದ ಸಂಪ್ರದಾಯ ಗೊತ್ತಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.