Publish Date: Mon, 22 Oct 2018 (08:57 IST)
Updated Date: Mon, 22 Oct 2018 (08:58 IST)
ಫಿರೋಜಾಬಾದ್: ಹುಡುಗಿಯನ್ನು ಚುಡಾಯಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಉರ್ದು ಕವಿ ಹಶೀಂ ಎಂಬವರ ಮೇಲೆ ಥಳಿಸಿ ಆಸಿಡ್ ದಾಳಿ ನಡೆಸಿದ ಘಟನೆ ನಡೆದಿದೆ.
ದಾರಿಯಲ್ಲಿ ಹೋಗುತ್ತಿದ್ದ ಹುಡುಗಿಯನ್ನು ಮೂವರು ಯುವಕರ ಗುಂಪು ಚುಡಾಯಿಸುತ್ತಿತ್ತು. ಇದನ್ನು ಪ್ರಶ್ನಿಸಿದ್ದ ಹಶೀಂ ಮೇಲೆ ಈ ಮೂವರು ಯುವಕರು ಥಳಿಸಿದ್ದಲ್ಲದೆ, ಆಸಿಡ್ ಎರಚಿದ್ದಾರೆ.
ಇದೀಗ ಹಶೀಂ ಮುಖ ಮತ್ತು ಎದೆಭಾಗದಲ್ಲಿ ಆಸಿಡ್ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ದಾಳಿ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.