Select Your Language

Notifications

webdunia
webdunia
webdunia
webdunia

ಮಹಿಳೆಯರಂತೆ ಡ್ರೆಸ್ ಮಾಡಿದ್ದನ್ನು ನೋಡಿ ತಮಾಷೆ ಮಾಡಿದರೆಂದು ಪ್ರಾಣಕ್ಕೇ ಕುತ್ತು ತಂದ!

ಮಹಿಳೆಯರಂತೆ ಡ್ರೆಸ್ ಮಾಡಿದ್ದನ್ನು ನೋಡಿ ತಮಾಷೆ ಮಾಡಿದರೆಂದು ಪ್ರಾಣಕ್ಕೇ ಕುತ್ತು ತಂದ!
ಚೆನ್ನೈ , ಶುಕ್ರವಾರ, 19 ಅಕ್ಟೋಬರ್ 2018 (09:32 IST)
ಚೆನ್ನೈ: ಟಿಕ್ ಟಾಕ್ ಎಂಬ ಡಬ್ಮಾಶ್ ಆಪ್ ನಲ್ಲಿ ಮಹಿಳೆಯರಂತೆ ವೇಷ ತೊಟ್ಟು ಆಕ್ಟಿಂಗ್ ಮಾಡಿದ್ದನ್ನು ನೋಡಿ ಸ್ನೇಹಿತರು ತಮಾಷೆ ಮಾಡಿದರೆಂದು 24 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈನಲ್ಲಿ ನಡೆದಿದೆ.

ಯುವಕನ ವೇಷ ನೋಡಿ ಆಪ್ ನಲ್ಲಿರುವ ಫಾಲೋವರ್ ಗಳು, ಸ್ನೇಹಿತರು ಹೆಂಗಸು ಎಂದು ತಮಾಷೆ ಮಾಡುತ್ತಿದ್ದರು. ಇನ್ನು ಕೆಲವರು ಎಡಬಿಡಂಗಿ ಎಂದು ಕೀಟಲೆ ಮಾಡುತ್ತಿದ್ದರಿಂದ ಮನನೊಂದು ಕಲ್ಯಾಣರಸನ್ ಎಂಬಾತ ಚಲಿಸುತ್ತಿರುವ ರೈಲಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ.

ಇದೀಗ ಪೊಲೀಸರು ಈತನ ಫೋನ್ ಗಾಗಿ ಹುಡುಕಾಟ ನಡೆಸಿದ್ದಾರೆ. ಇಂತಹ ವಿಡಿಯೋ ಅಪ್ ಲೋಡ್ ಮಾಡಿದ್ದಕ್ಕೆ ಆತನ ಕುಟುಂಬದವರು ಆತನ ಮೇಲೆ ಹರಿಹಾಯ್ದಿದ್ದರು. ಈ ವಿಡಿಯೋ ಅಪ್ ಲೋಡ್ ಮಾಡಿದ ಮೇಲೆ ಟೀಕೆಗಳಿಂದ ಆತ ತೀವ್ರ ಮನನೊಂದಿದ್ದ ಎಂದು ಕಲ್ಯಾಣರಸನ್ ನೆರೆಮನೆಯಾತ ಪೊಲೀಸರಿಗೆ ಹೇಳಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲಿ ದಸರಾ ಸಂಭ್ರಮವಿದ್ದರೂ ರಾಜಮಾತೆ ಪ್ರಮೋದಾದೇವಿಗೆ ಬೇಸರ!