Select Your Language

Notifications

webdunia
webdunia
webdunia
Sunday, 13 April 2025
webdunia

'ಶಬರಿಮಲೆ ವಿಚಾರದ ಬದಲು ಕಾವೇರಿ ನದಿ ನೀರಿನ ವಿಚಾರ ಮಾತನಾಡಿ' ಕನ್ನಡಿಗರನ್ನು ಕೆರಳಿಸಿದ್ರಾ ಕಮಲ್ ಹಾಸನ್

ಮಾಧ್ಯಮ
ಚೆನ್ನೈ , ಮಂಗಳವಾರ, 23 ಅಕ್ಟೋಬರ್ 2018 (11:07 IST)
ಚೆನ್ನೈ : ಮಾಧ್ಯಮದವರು ಶಬರಿಮಲೆ  ವಿಚಾರಕ್ಕೆ ಸಂಬಂಧಪಟ್ಟ ಪ್ರಶ್ನೆ ಕೇಳಿದರೆ ಕಾವೇರಿ ನದಿ ನೀರಿನ ವಿಚಾರವಾಗಿ ಮಾತನಾಡಿ ಕನ್ನಡಿಗರ ಕೆರಳಿಸುವ ಕೆಲಸ ಇದೀಗ ನಟ ಕಮಲ್ ಹಾಸನ್  ಮಾಡಿದ್ದಾರೆ.


ಹೌದು. ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರೋ ತೀರ್ಪಿನ ಕುರಿತು  ಇದೀಗ ಬಾರೀ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಈ ವಿದ್ಯಮಾನದ ಬಗ್ಗೆ ಏನಂತೀರಿ ಅಂತ ಮಾಧ್ಯಮದವರು ನಟ ಕಮಲ್ ಹಾಸನ್ ಬಳಿ ಕೇಳಿದರೆ ಅದಕ್ಕೆ ಅವರು “ಕೇರಳ ಸರ್ಕಾರ ಸುಪ್ರೀಂ ತೀರ್ಪನ್ನು ಗೌರವಿಸಿದೆ. ಅದಕ್ಕೆ ಪೂರಕವಾಗಿಯೇ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಕಾವೇರಿ ನದಿ ನೀರಿನ ವಿಚಾರವಾಗಿ ತಮಿಳುನಾಡಿಗೆ ಅನ್ಯಾಯ ಮಾಡುತ್ತಿದೆ’’ ಎಂದು ಹೇಳಿದ್ದಾರೆ.


ಇದರಲ್ಲಿ ಕರ್ನಾಟಕದ ಬಗ್ಗೆ ಮಾತನಾಡುವ ಯಾವುದೇ ಸಂದರ್ಭ ಇರದಿದ್ದರೂ ಕೂಡ ನಟ ಕಮಲ್ ಹಾಸನ್  ಶಬರಿಮಲೆ  ವಿಚಾರ ಮಾತನಾಡುವ ಬದಲು ಈ ರೀತಿಯಾಗಿ ಹೇಳಿಕೆ ನೀಡಿ ಸುಖಾಸುಮ್ಮನೆ ಕನ್ನಡಿಗರ ಕೆರಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದುನಿಯಾ ವಿಜಯ್ ವಿರುದ್ಧ ಮಗಳಿಂದಲೇ ದೂರು ದಾಖಲು