Select Your Language

Notifications

webdunia
webdunia
webdunia
webdunia

ಸರಕಾರ ಅಸ್ತಿರ: ಮಾಧ್ಯಮ ಕೆಲಸ ಎಂದ ಎಕ್ಸ್ ಸಿಎಂ

ಸಿದ್ದರಾಮಯ್ಯ
ಮೈಸೂರು , ಭಾನುವಾರ, 30 ಸೆಪ್ಟಂಬರ್ 2018 (19:07 IST)
ಸರ್ಕಾರ ಅಸ್ತಿರಗೊಳಿಸೋ ಪ್ರಯತ್ನ ಮಾಧ್ಯಮಗಳ ಸೃಷ್ಟಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಯಾವೊಬ್ಬ ಶಾಸಕರು ಸರ್ಕಾರ ಅಸ್ತಿರಗೊಳಿಸಲು ಕೈ ಹಾಕಿಲ್ಲ. ರಾಜ್ಯಾದ್ಯಂತ ಸಮಿಶ್ರ  ಸರ್ಕಾರದ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ. ಸಾಲ ಮನ್ನಾ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿ ನಡೆಯಲಿದೆ ಎಂದ ಅವರು, ಅಗತ್ಯ ಬಿದ್ರೆ ಮಾತ್ರ ಸಮನ್ವಯ ಸಮಿತಿ ಸಭೆ ನಡೆಯಲಿದೆ ಎಂದು ಹೇಳಿದರು.

ಸೆ.3ರ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನಾನು  ಟ್ರಬಲ್ ಶೂಟರ್ ನಾನೇ. ಸಮಿಶ್ರ ಸರ್ಕಾರ ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಲು ನನ್ನ  ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರೋದು. ನಾನು ಟ್ರಬಲ್ ಶೂಟರ್ ನಾನೇ ಎಂದು ಹೇಳಿದರು. ಇನ್ನು ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಯ್ಕೆ ವಿಚಾರ ಕೋರ್ಟ್ ನಲ್ಲಿದೆ. ನ್ಯಾಯಾಲಯದ ಆದೇಶದ ಬಳಿಕ ಮೇಯರ್, ಉಪಮೇಯರ್ ಆಯ್ಕೆ ನಡೆದಲಿದೆ ಎಂದು ಮಾಹಿತಿ ನೀಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಚಿರತೆ ಪ್ರತ್ಯಕ್ಷ: ಭಯಬಿದ್ದ ಜನತೆ