Select Your Language

Notifications

webdunia
webdunia
webdunia
webdunia

ರಾಜ್ಯ ಕಾಂಗ್ರೆಸ್ ಪಾಲಿಗೆ ಈ ಸಿದ್ದರಾಮಯ್ಯನವರೇ ಟ್ರಬಲ್ ಶೂಟರ್

ರಾಜ್ಯ ಕಾಂಗ್ರೆಸ್ ಪಾಲಿಗೆ ಈ ಸಿದ್ದರಾಮಯ್ಯನವರೇ ಟ್ರಬಲ್ ಶೂಟರ್
ಬೆಂಗಳೂರು , ಶುಕ್ರವಾರ, 28 ಸೆಪ್ಟಂಬರ್ 2018 (08:49 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಡಿಸಿಎಂ ಆಗಿ ಪರಮೇಶ್ವರ್ ಇದ್ದರೂ, ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಇದ್ದರೂ ಪಕ್ಷದ, ನಾಯಕರ ಸಂಪೂರ್ಣ ಹಿಡಿತ ಹೊಂದಿರುವ ಸಿದ್ದರಾಮಯ್ಯನವರೇ ಟ್ರಬಲ್ ಶೂಟರ್ ಎನಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ ವಿದೇಶ ಪ್ರವಾಸ ತೆರಳುತ್ತಿದ್ದಂತೆ ಉಂಟಾಗಿದ್ದ ಬೆಳಗಾವಿ ಭಿನ್ನಮತ ಅವರು ರಾಜ್ಯಕ್ಕೆ ಮರಳಿದ ಮೇಲೆ ಎಲ್ಲಾ ನಾಯಕರ ಜತೆ ಮಾತುಕತೆ ನಡೆಸಿದ ಮೇಲೆ ಸದ್ಯಕ್ಕೆ ತಣ್ಣಗಾಗಿದೆ.

ಇದೀಗ ಮೇಯರ್ ಆಯ್ಕೆ ವಿಚಾರದಲ್ಲೂ ಎಲ್ಲಾ ನಾಯಕರು ಸಿದ್ದರಾಮಯ್ಯ ನಿವಾಸದಲ್ಲಿ ಚರ್ಚೆ ನಡೆಸಿದ್ದು, ಅಂತಿಮ ತೀರ್ಮಾನ ವಿಚಾರವನ್ನು ಅವರಿಗೇ ವಹಿಸಿದ್ದಾರೆ. ಮೇಯರ್ ಆಯ್ಕೆ ವಿಚಾರದಲ್ಲೂ ಪೈಪೋಟಿ ಇದ್ದು, ಇದನ್ನು ಬಗೆಹರಿಸುವ ಹೊಣೆ ಸಿದ್ದರಾಮಯ್ಯನವರ ಹೆಗಲಿಗೇರಿದೆ. ಹೀಗಾಗಿ ಒಂದರ್ಥದಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಸಮನ್ವಯ ಸಮಿತಿ ಅಧ್ಯಕ್ಷರಾಗುವುದರ ಜತೆಗೆ ಪಕ್ಷದ ಪಾಲಿಗೆ ಟ್ರಬಲ್ ಶೂಟರ್ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮೆಡಿಕಲ್ ಶಾಪ್ ಹುಡುಕಿಕೊಂಡು ಹೋಗಬೇಡಿ!