Publish Date: Thu, 27 Sep 2018 (16:54 IST)
Updated Date: Thu, 27 Sep 2018 (16:59 IST)
ಕಾಂಗ್ರೆಸ್-ಜೆಡಿಎಸ್ ಶಾಸಕರು ನಿರ್ವೀರ್ಯರು ಅಂತಾ ತುಮಕೂರಿನ ಬಿಜೆಪಿ ಮಾಜಿ ಸಂಸದ ಜಿ.ಎಸ್.ಬಸವರಾಜು ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ಕಾಂಗ್ರೆಸ್-ಜೆಡಿಎಸ್ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ತುಮಕೂರು ಜಿಲ್ಲೆಯ ಮೂವರು ಮಂತ್ರಿಗಳು ಸೇರಿದಂತೆ ಕಾಂಗ್ರೆಸ್- ಜೆಡಿಎಸ್ ಶಾಸಕರು ನಿರ್ವೀರ್ಯರಾಗಿದ್ದಾರೆ. ತುಮಕೂರು ಜಿಲ್ಲೆಯನ್ನ ನಾಶ ಮಾಡಲು ಇವರು ಮುಂದಾಗಿದ್ದು, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಸೇರಿದಂತೆ ಎಲ್ಲರೂ ನಿರ್ವೀಯರು ಅಂತಾ ಜರಿದಿದ್ದಾರೆ.
ಪರಮೇಶ್ವರ್ ಝಿರೋ ಟ್ರಾಫಿಕ್ ಗೋಸ್ಕರ ಹೊರಾಡ್ತಾರೆ, ಡಿ.ಕೆ. ಬ್ರದರ್ಸ್ ದಬ್ಬಾಳಿಕೆ ಜಿಲ್ಲೆ ಮೇಲೆ ಹೆಚ್ಚಾಗಿದೆ. ಜಿಲ್ಲೆಗೆ ಬರುವ ಹೇಮಾವತಿ ನೀರನ್ನು ಮಾಗಡಿ-ಕನಕಪುರಕ್ಕೆ ಕೊಂಡೊಯ್ಯಲು ಹುನ್ನಾರ ನಡೆಸಿದ್ದಾರೆ. ಲಿಂಕಿಂಗ್ ಕೆನಾಲ್ ಮೂಲಕ ನೀರು ಸಾಗಿಸಲು ಪ್ಲಾನ್ ಮಾಡಿದ್ದಾರೆ. ಇಷ್ಟಾದರೂ ಜಿಲ್ಲೆಯ ಕಾಂಗ್ರೆಸ್ – ಜೆಡಿಎಸ್ ನಾಯಕರು ಚಕಾರ ಎತ್ತುತ್ತಿಲ್ಲ.
ಡಿ.ಕೆ.ಶಿವಕುಮಾರ್ ಗೂಂಡಾ ಪ್ರವೃತ್ತಿ ಹೆಚ್ಚಾಗಿದೆ ಅವರನ್ನು ತುಮಕೂರು ನಗರದ ಒಳಗೆ ಸೇರಿಸಬಾರದು ಅಂತಾ ಎಚ್ಚರಿಸಿದ್ದಾರೆ.