Publish Date: Thu, 27 Sep 2018 (16:46 IST)
Updated Date: Thu, 27 Sep 2018 (16:49 IST)
ಆ ನಗರದಲ್ಲಿ ಜನರ ಪರದಾಟ ಒಂದೆರಡಲ್ಲ. ಮಳೆ ಬಂದರೆ ಜನರ ಸಮಸ್ಯೆ ಹೇಳತೀರದಾಗಿದೆ.
ದಾವಣಗೆರೆ ನಗರದಲ್ಲಿ ಜನರ ಪರದಾಟ ಒಂದೆರಡಲ್ಲ. ಮಳೆ ಬಂದರೆ ಜನರ ಸಮಸ್ಯೆ ಹೇಳತೀರದಾಗಿದೆ. ಒಂದು ಗಂಟೆಗೂ ಹೆಚ್ಚು ಸುರಿದ ಮಳೆಯಿಂದ ದಾವಣಗೆರೆ ನಗರದ ಶಿವಾಲಿ ಚಿತ್ರಮಂದಿರದ ರಸ್ತೆ ಭಾಗಶಃ ಮುಳುಗಿ ಹೋಗಿತ್ತು.
ಈ ವೇಳೆ ಸರ್ಕಾರಿ ಬಸ್ ಹಾಗೂ ಬೈಕ್ ಸವಾರ ರಸ್ತೆ ಮಧ್ಯೆ ಸಿಕ್ಕಿಹಾಕಿಕೊಂಡು ಪರದಾಡಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಎರಡು ಗಂಟೆಗೂ ಹೆಚ್ಚು ಕಾಲ ವಾಹನ ಸವಾರರು ಪರದಾಡಿದರು.
ಆದರೂ ಪಾಲಿಕೆ ಅಧಿಕಾರಿಗಳು, ನೌಕರರು ಇತ್ತ ಸುಳಿದಿಲ್ಲ. ನಿರ್ಲಕ್ಷ್ಯ ವಹಿಸಿದ ಮಹಾನಗರ ಪಾಲಿಕೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.