Select Your Language

Notifications

webdunia
webdunia
webdunia
webdunia

ಚಿರತೆ ಪ್ರತ್ಯಕ್ಷ: ಭಯಬಿದ್ದ ಜನತೆ

ಚಿರತೆ ಪ್ರತ್ಯಕ್ಷ: ಭಯಬಿದ್ದ ಜನತೆ
ಚಿಕ್ಕೋಡಿ , ಭಾನುವಾರ, 30 ಸೆಪ್ಟಂಬರ್ 2018 (19:04 IST)
ಎರಡು ಚಿರತೆಗಳು ಪ್ರತ್ಯಕ್ಷಗೊಂಡ ಪರಿಣಾಮ ಗ್ರಾಮದ ಜನರು ಆತಂಕಗೊಂಡಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಹೊನಲು ಗುಡ್ಡ ಹತ್ತಿರ ಇರುವ ಲಕ್ಷ್ಮೀ ಬೆಟ್ಟದಲ್ಲಿ ಚಿರತೆಗಳು ಕಾಣಿಸಿಕೊಂಡಿವೆ.  ಚಿರತೆ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಬೆಟ್ಟದ ಬಳಿ ಚಿರತೆಗಳ ಹೆಜ್ಜೆ ಗುರತು ಕಾಣಿಸಿರುವುದರಿಂದ ತೋಟದ ವಸತಿ ಜನರು ಕಂಗಲಾಗಿದ್ದಾರೆ.
ಇದೇ ಮೊದಲ ಬಾರಿಗೆ ಚಿರತೆ ಕಾಣಿಸಿರುವುದರಿಂದ ಇಡೀ ಗ್ರಾಮದ ಜನರು ಬಡಿಗೆ ಹಿಡಿದುಕೊಂಡು ಚಿರತೆಗಾಗಿ ಶೋಧ ಮಾಡುತ್ತಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗೆ ಚಿರತೆ ಇರುವ ಕುರಿತು ಮಾಹಿತಿ ನೀಡಲಾಗಿದೆ. ಆದರೂ ಸಿಬ್ಬಂದಿ ಸ್ಥಳಕ್ಕೆ ಬಾರದೆ ಇರುವದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕೋಡಿ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರದ ವಿರುದ್ಧ ಮುತಾಲಿಕ್ ಆಕ್ರೋಶ