Publish Date: Sun, 23 Sep 2018 (10:26 IST)
Updated Date: Sun, 23 Sep 2018 (10:27 IST)
ಬೆಂಗಳೂರು: ಮಾರುತಿ ಗೌಡ ಎಂಬವರನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿದ ಆರೋಪದ ಮೇಲೆ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಕಾಂಪಿಟೀಷನ್ ನಡೆಯುತ್ತಿತ್ತು. ಈ ವೇಳೆ ದುನಿಯಾ ವಿಜಿ ಮತ್ತು ತಂಡ ಟ್ರೈನರ್ ಮಾರುತಿ ಗೌಡ ಅವರನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಇದೀಗ ಮಾರುತಿಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುನಿಯಾ ವಿಜಿ ಮತ್ತು ಸಹಚರರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ದುನಿಯಾ ವಿಜಿಗೆ ಹಿಂದೆ ಜಿಮ್ ಟ್ರೈನರ್ ಆಗಿದ್ದ ಪಾನಿಪೂರಿ ಕಿಟ್ಟಿ ಅವರ ಸಂಬಂಧಿ ಮಾರುತಿ ಗೌಡ. ಇದೀಗ ಪಾನಿಪೂರಿ ಕಿಟ್ಟಿ ದುನಿಯಾ ವಿಜಿ ವಿರುದ್ಧ ದೂರು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.