ಬೆಂಗಳೂರು: ಮಾರುತಿ ಗೌಡ ಕಿಡ್ನ್ಯಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದುನಿಯಾ ವಿಜಯ್ ಮತ್ತು ನಾಲ್ವರು ಸಹಚರರನ್ನು ವಿಚಾರಾಣಾಧೀನ ಖೈದಿಗಳ ವಿಭಾಗದಲ್ಲಿ ಇರಿಸಲಾಗಿದೆ.
									
			
			 
 			
 
 			
					
			        							
								
																	ಸಾಮಾನ್ಯ ಖೈದಿಗಳಂತೆ ನಟ ಹಾಗೂ ಸಹಚರರಿಗೆ ಸೌಲಭ್ಯ ಒದಗಿಸಲಾಗಿದೆ. ದುನಿಯಾ ವಿಜಯ್ ಹಾಗೂ ನಾಲ್ವರು ಸಹಚರರಿಗೆ ಯುಟಿಪಿ ಸಂಖ್ಯೆ ನೀಡಲಾಗಿದ್ದು, ವಿಜಯ್ ಈಗ ಖೈದಿ ನಂ.9035 ಆಗಿದ್ದಾರೆ.
									
										
								
																	ಈ ನಡುವೆ ದುನಿಯಾ ವಿಜಯ್ ವಿರುದ್ಧ ಹಲ್ಲೆಗೊಳಗಾದ ಮಾರುತಿ ಗೌಡ ಕುಟುಂಬ ಡಿಸಿಎಂ ಪರಮೇಶ್ವರ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ದುನಿಯಾ ವಿಜಯ್ ಜಾಮೀನಿನ ಮೇಲೆ ಹೊರಬಂದರೆ ತಮಗೆ ಆತಂಕವಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಹಲ್ಲೆಯಿಂದಾಗಿ ಮಾರುತಿ ಗೌಡಗೆ ಮಾರಣಾಂತಿಕ ಗಾಯವಾಗಿದ್ದು, ಪ್ರಕರಣದ ವಾದ ಮಂಡಿಸಲು ಸರ್ಕಾರಿ ಅಭಿಯೋಜಕರನ್ನು ನೇಮಿಸುವಂತೆ ಮನವಿ ಸಲ್ಲಿಸಿದ್ದಾರೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.