ಬೆಂಗಳೂರು : ದುನಿಯಾ ವಿಜಯ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ವಿಜಯ್ ಪುತ್ರಿ ತಂದೆಯ ವಿರುದ್ಧವೇ ದೂರು ದಾಖಲು ಮಾಡಿದ್ದಾಳೆ.
ಈ ಹಿಂದೆಯಷ್ಟೇ ದುನಿಯಾ ವಿಜಯ್ ಪಾನೀಪುರಿ ಕಿಟ್ಟಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಜೈಲು ವಾಸ ಅನುಭವಿಸಿ ಜಾಮೀನಿನ ಮೂಲಕ ಹೊರಬಂದಿದ್ದರು. ಇದೀಗ ಅವರು ಮಗಳು ಮೋನಿಕಾ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ ತನ್ನ ತಂದೆ ವಿಜಯ್ ವಿರುದ್ಧ ದೂರು ನೀಡಿದ್ದಾಳೆ.
ದುನಿಯಾ ವಿಜಯ್, ಕೀರ್ತಿ ಸೇರಿ ಐವರ ವಿರುದ್ಧ ವಿಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ಇದೀಗ ಪೊಲೀಸರು ನಟನ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.