Select Your Language

Notifications

webdunia
webdunia
webdunia
webdunia

ದೇವರಿಗೆ ಪೂಜೆ ಸಲ್ಲಿಸುವಾಗ ಊದುಬತ್ತಿ ಹಾಗೂ ಧೂಪಗಳನ್ನು ಹೆಚ್ಚುವುದ್ಯಾಕೆ ಗೊತ್ತಾ?

ದೇವರಿಗೆ ಪೂಜೆ ಸಲ್ಲಿಸುವಾಗ ಊದುಬತ್ತಿ ಹಾಗೂ  ಧೂಪಗಳನ್ನು ಹೆಚ್ಚುವುದ್ಯಾಕೆ ಗೊತ್ತಾ?
ಬೆಂಗಳೂರು , ಮಂಗಳವಾರ, 23 ಅಕ್ಟೋಬರ್ 2018 (09:35 IST)
ಬೆಂಗಳೂರು : ದೇವರಿಗೆ ಪೂಜೆ ಸಲ್ಲಿಸುವಾಗ ಉದುಬತ್ತಿ ಹಾಗೂ  ಧೂಪಗಳನ್ನು ಹೆಚ್ಚುತ್ತಾರೆ. ಇದು ಪುರಾತನ ಕಾಲದಿಂದಲೂ ಬಂದಂತಹ ಆಚರಣೆ.  ಇದನ್ನು ಹಚ್ಚುವುದರ ಹಿಂದೆ ಒಂದು  ವೈಜ್ಞಾನಿಕ ಕಾರಣವೂ ಇದೆ.


ಪುರಾತನ ಕಾಲದಲ್ಲಿ ಹಲವು ಔಷಧೀಯ ವಸ್ತುಗಳನ್ನು ಊದಿನಕಡ್ಡಿಯಲ್ಲಿ ಅಳವಡಿಸಲಾಗುತ್ತಿತ್ತು. ಲೋಬಾನವನ್ನು ಬಾಸ್ವೆಲ್ಲಿಯಾ ಎಂಬ ಮರದ ಅಂಟಿನಿಂದ ತಯಾರಿಸಲಾಗುತ್ತದೆ. ನಾವು ಅದರ ಸುಗಂಧವನ್ನು ಆಸ್ವಾದಿಸಿದಾಗ, TRPV3 ಪ್ರೋಟೀನ್ ಅನ್ನು ನಮ್ಮ ಮೆದುಳಿಗೆ ಪ್ರಚೋದಿಸುತ್ತದೆ. ಇದರಿಂದ ನಮ್ಮ ಇಂದ್ರಿಯಗಳೆಲ್ಲ ಸಡಿಲಗೊಂಡು, ಒತ್ತಡ ಕಡಿಮೆಯಾಗುತ್ತದೆ.


ಹಾಗೇ ಧೂಪದ್ರವ್ಯಗಳನ್ನು ಹಚ್ಚುವುದರಿಂದ ಉಲ್ಲಾಸಮಯ ಹಾಗೂ ಕಾಂತಿವರ್ಧಕ ಸುವಾಸನೆ ಹರಡುತ್ತದೆ. ಅದು ನಮ್ಮ ಮನಸ್ಸನ್ನು ಪ್ರಶಾಂತಗೊಳಿಸಿ, ಗಮನ ಕೇಂದ್ರೀಕರಿಸಲು ನೆರವಾಗುತ್ತದೆ. ಹಾಗಾಗಿ ಪೂಜೆಯ ಸಮಯದಲ್ಲಿ ಅವನ್ನು ಹಚ್ಚಲಾಗುತ್ತದೆ.


ಆದರೆ ಇತ್ತೀಚಿನ ದಿನಗಳಲ್ಲಿ ಊದಿನಕಡ್ಡಿಗಳನ್ನು ಕೃತಕ ಪದಾರ್ಥಗಳಿಂದ ತಯಾರಿಸುತ್ತಿರುವ ಕಾರಣ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ದೇವರ ದರ್ಶನ ಮಾಡಿದ ಮೇಲೆ ಬೇರೆ ಯಾವ ದೇವಸ್ಥಾನಕ್ಕೂ ಹೋಗಬಾರದಂತೆ