ಮಹಿಳೆಯರು ಗಂಡನಿಗಿಂತ ಈ ವಿಚಾರದಲ್ಲಿ ಸ್ನೇಹಿತರನ್ನೇ ನಂಬುತ್ತಾರೆ!

ಸೋಮವಾರ, 5 ನವೆಂಬರ್ 2018 (06:39 IST)
ಬೆಂಗಳೂರು: ಮಹಿಳೆಯರು ತಮ್ಮ ಗುಟ್ಟಿನ ಸಂಗತಿಗಳನ್ನು ಹೆಚ್ಚು ಹಂಚಿಕೊಳ್ಳುವುದು ಗಂಡನ ಬಳಿ ಎಂದು ನೀವಂದುಕೊಂಡರೆ ತಪ್ಪು. ಆಕೆ ಹೆಚ್ಚು ವಿಚಾರಗಳನ್ನು ಗಂಡನಿಗಿಂತ ಸ್ನೇಹಿತರಲ್ಲೇ ಹಂಚಿಕೊಳ್ಳುತ್ತಾಳಂತೆ! ಹಾಗಂತ ಸಂಶೋಧನಾ ವರದಿಯೊಂದು ಹೇಳಿದೆ.

ಹೆಲ್ತ್ ಕೇರ್ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬಯಲಾಗಿದೆ. ಸುಮಾರು 1500 ಕ್ಕೂ ಹೆಚ್ಚು ಮಹಿಳೆಯರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಮಹಿಳೆಯರಿಗೆ ತಮ್ಮ ಲವ್ ಲೈಫ್, ಸಂಬಂಧಗಳ ಕುರಿತಾದ ಗುಟ್ಟುಗಳನ್ನು ಯಾರ ಬಳಿ ಹೆಚ್ಚು ಹಂಚಿಕೊಳ್ಳುತ್ತೀರಿ ಎಂದು ಪ್ರಶ್ನಿಸಲಾಗಿತ್ತು.

ಇದಕ್ಕೆ ಶೇ.50 ಕ್ಕೂ ಹೆಚ್ಚು ಮಹಿಳೆಯರು ಸ್ನೇಹಿತರ ಬಳಿಯೇ ಹೆಚ್ಚು ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಮಹಿಳೆಯರ ಪ್ರಕಾರ ಅವರು ಗಂಡನಿಗಿಂತ ತಮ್ಮ ಸ್ನೇಹಿತರಲ್ಲಿ ಹೆಚ್ಚು ವಿಚಾರಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜ್ವರ ಬಂದಿದೆಯೇ? ಹಾಗಿದ್ದರೆ ಈ ಮನೆ ಮದ್ದು ಮಾಡಿ ನೋಡಿ