Publish Date: Mon, 21 Oct 2019 (10:01 IST)
Updated Date: Mon, 21 Oct 2019 (16:37 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಮೊದಲ ವಾರವೇ ಗುರುಲಿಂಗ ಸ್ವಾಮೀಜಿ ಎಲಿಮಿನೇಟ್ ಆಗಿ ಹೊರಬಂದಿರುವುದು ಕೆಲವು ವೀಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ.
ಈ ವಾರ ಚೈತ್ರಾ ಕೋಟೂರು ಹೊರಹೋಗಬಹುದು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೆ ಅಚ್ಚರಿಯ ರೂಪದಲ್ಲಿ ಸ್ವಾಮೀಜಿ ಹೊರಹೋಗಿದ್ದಾರೆ. ಈ ಬಗ್ಗೆ ವೀಕ್ಷಕರು ಬಿಗ್ ಬಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಮಿನೇಟ್ ಆದ ಬಳಿಕ ಚೈತ್ರಾ ಶೈನಿ ಜತೆ ಕ್ರಶ್ ಆದ ಹಾಗೆ ತಮಾಷೆ ಮಾಡುತ್ತಿದ್ದಕ್ಕೇ ಅವರನ್ನು ಉಳಿಸಿಕೊಳ್ಳಲಾಗಿದೆಯೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಸ್ವಾಮೀಜಿ ಇನ್ನೂ ಸ್ವಲ್ಪ ಸಮಯ ಇದ್ದಿದ್ದರೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದ್ದರು ಎಂದು ಇನ್ನು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.