Publish Date: Fri, 18 Oct 2019 (09:10 IST)
Updated Date: Fri, 18 Oct 2019 (09:11 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡ ಶೋ ಆರಂಭವಾಗಿ ಆಗಲೇ ಒಂದು ವಾರವಾಗುತ್ತಾ ಬಂದಿದೆ. ಅಲ್ಲಿಗೆ ಮೊದಲ ಎಲಿಮಿನೇಷನ್ ಗ್ಯಾರಂಟಿಯಾಗಿದೆ.
ಇನ್ನೂ ಸ್ಪರ್ಧಿಗಳಲ್ಲಿ ಒಬ್ಬರಿಗೊಬ್ಬರು ಸರಿಯಾಗಿ ಪರಿಚಯವೇ ಆಗಿಲ್ಲ. ಮಾತಿನ ಏಟು, ಎದಿರೇಟುಗಳು ಶುರುವಾಗಿಲ್ಲ. ಆದರೆ ಅದಕ್ಕೆ ಮೊದಲು ನಾಮಿನೇಷನ್ ಪ್ರಕ್ರಿಯೆಯಲ್ಲಿ ಐವರು ಸ್ಪರ್ಧಿಗಳು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.
ಇವರಲ್ಲಿ ಕುರಿ ಪ್ರತಾಪ್ ಡೈರೆಕ್ಟ್ ನಾಮಿನೇಟ್ ಆದವರು. ಅವರ ಫ್ಯಾನ್ ಫಾಲೋವರ್ಸ್ ನೋಡಿದರೆ ಅವರು ಎಲಿಮಿನೇಟ್ ಆಗುವ ಸಾಧ್ಯತೆಯಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಲೆಕ್ಕಾಚಾರದ ಪ್ರಕಾರ ಚೈತ್ರಾ ಕೊಟೂರು ಎಲಿಮಿನೇಟ್ ಆಗಬಹುದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಉಳಿದಂತೆ ಚೈತ್ರಾ ವಾಸುದೇವ್ ಹೆಸರೂ ಕೇಳಿಬರುತ್ತಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ರಾಜು ತಾಳಿಕೋಟೆ ಮತ್ತು ಗುರುಲಿಂಗ ಸ್ವಾಮೀಜಿ ಉಳಿದುಕೊಳ್ಳಬಹುದು ಎಂಬ ಲೆಕ್ಕಾಚಾರವಿದೆ. ಅಂತಿಮವಾಗಿ ಯಾರಿಗೆ ದುರಾದೃಷ್ಟ ಕಾದಿದೆ ಎನ್ನುವುದು ಇಂದು ರಾತ್ರಿ ಗೊತ್ತಾಗಲಿದೆ.