Publish Date: Fri, 18 Oct 2019 (09:01 IST)
Updated Date: Fri, 18 Oct 2019 (09:07 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಶ್ರೀಲೀಲಾ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಭರಾಟೆ ಸಿನಿಮಾ ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಭರಾಟೆ ಸಿನಿಮಾ ಹಾಡುಗಳು, ಟ್ರೈಲರ್ ಈಗಾಗಲೇ ಭರ್ಜರಿ ಹಿಟ್ ಆಗಿವೆ. ಅದರಲ್ಲೂ ಭರ ಭರ ಭರಾಟೆ ಹಾಡು ಯುವ ಜನರಿಗೆ ಟ್ರೆಂಡ್ ಆಗಿತ್ತು. ಹೀಗಾಗಿ ಸಿನಿಮಾ ಬಗ್ಗೆಯೂ ಕ್ರೇಜ್ ಹುಟ್ಟಿದೆ.
ಅದರಲ್ಲೂ ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಶ್ರೀಲೀಲಾ ನಾಯಕಿಯಾಗಿದ್ದಾರೆ. ಇನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಈಗಾಗಲೇ ಬೆನ್ನು ಬೆನ್ನಿಗೆ ಎರಡು ಹಿಟ್ ಸಿನಿಮಾ ಕೊಟ್ಟು ಇದೂ ಸೂಪರ್ ಹಿಟ್ ಆಗುವ ನಿರೀಕ್ಷೆಯಲ್ಲಿದ್ದಾರೆ.