Publish Date: Tue, 15 Oct 2019 (09:47 IST)
Updated Date: Tue, 15 Oct 2019 (09:49 IST)
ಬೆಂಗಳೂರು: ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಎರಡನೇ ಮಗುವಿನ ಸೀಮಂತ ಶಾಸ್ತ್ರ ಮುಗಿಸಿಕೊಂಡಿದ್ದಾರೆ.
ಆ ಫೋಟೋಗಳನ್ನು ರಾಧಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಸ್ನೇಹಿತರೆಲ್ಲಾ ಸೇರಿ ನನ್ನ ಸೀಮಂತ ಶಾಸ್ತ್ರ ಮುಗಿಸಿದ್ದಾರೆ ಎಂದು ರಾಧಿಕಾ ಮುದ್ದಾದ ಡ್ರೆಸ್ ನಲ್ಲಿ ಮಿಂಚುತ್ತಿರುವ ಫೋಟೋ ಹಾಕಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿ, ಫೋಟೋ ಸದ್ಯದಲ್ಲೇ ಕೊಡ್ತೀನಿ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ನವಂಬರ್ ನಲ್ಲಿ ರಾಧಿಕಾ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ.