Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯಲ್ಲಿ ಗೌರಿ ಲಂಕೇಶ್ ಕೊಲೆ ಪ್ರಕರಣ ವಿವರಿಸಿದ ರವಿ ಬೆಳಗೆರೆ

ರವಿ ಬೆಳಗೆರೆ
ಬೆಂಗಳೂರು , ಬುಧವಾರ, 16 ಅಕ್ಟೋಬರ್ 2019 (09:49 IST)
ಬೆಂಗಳೂರು: ಆರೋಗ್ಯ ಸಮಸ್ಯೆಯಿಂದಾಗಿ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದ ರವಿ ಬೆಳಗೆರೆ ಕಮ್ ಬ್ಯಾಕ್ ಮಾಡಿದ್ದಾರೆ. ರವಿ ಬೆಳಗೆರೆ ಮನೆಯಿಂದ ಹೊರ ಹೋಗಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ಈಗ ಚಿಕಿತ್ಸೆ ಬಳಿಕ ಕಮ್ ಬ್ಯಾಕ್ ಮಾಡಿದ್ದಾರೆ. ಆದರೆ ಕೇವಲ ಒಂದು ವಾರ ಮಾತ್ರ!



 
ವೈದ್ಯರ ಸಲಹೆ ಮೇರೆಗೆ ರವಿ ಬೆಳಗೆರೆ ಬಿಗ್ ಬಾಸ್ ನಲ್ಲಿ ಮುಂದುವರಿಯುತ್ತಿಲ್ಲ. ಈ ಶನಿವಾರದವರೆಗೆ ಕೇವಲ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಆದರೆ ರವಿ ಬೆಳಗೆರೆ ಮನೆಯಿಂದ ಹೊರ ಹೋಗುವ ಮೊದಲು ಸ್ಪರ್ಧಿಗಳನ್ನೆಲ್ಲಾ ಕೂರಿಸಿಕೊಂಡು ಕತೆ ಹೇಳಿಕೊಳ್ಳುತ್ತಿರಬೇಕಾದರೆ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ವಿಚಾರ ಪ್ರಸ್ತಾಪಿಸಿದ್ದಾರೆ.

ಗೌರಿ ಲಂಕೇಶ್ ಕೊಲೆಯಾದ ಸಂದರ್ಭವನ್ನು ವಿವರಿಸಿದ ರವಿ ಬೆಳಗೆರೆ ಬಳಿಕ ಈ ಕೊಲೆ ಪ್ರಕರಣದ ಬಗ್ಗೆ ಪೊಲೀಸರು 10 ಸಾವಿರ ಪುಟಗಳ ಎಫ್ ಐಆರ್ ದಾಖಲಿಸಿದ್ದನ್ನೂ ಹೇಳಿಕೊಂಡಿದ್ದಾರೆ. ಬೆಳಗೆರೆ ಕತೆಗೇ ಈಗ ಸಹ ಸ್ಪರ್ಧಿಗಳು ಅವರನ್ನು ಇಷ್ಟಪಡಲು ಆರಂಭಿಸಿದ್ದಾರೆ ಎನ್ನಲು ಅಡ್ಡಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಶುರುವಾಗಿ ಎರಡೇ ದಿನಕ್ಕೆ ಮತ್ತೊಂದು ಪ್ರೇಮ ಕತೆ ಶುರು?!