Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯೊಳಗಿದ್ದರೂ ಸ್ಪರ್ಧಿಗಳ ಸೋಷಿಯಲ್ ಮೀಡಿಯಾ ಸಕ್ರಿಯವಾಗಿರುವುದು ಹೇಗೆ?!

ಬಿಗ್ ಬಾಸ್ ಮನೆಯೊಳಗಿದ್ದರೂ ಸ್ಪರ್ಧಿಗಳ ಸೋಷಿಯಲ್ ಮೀಡಿಯಾ ಸಕ್ರಿಯವಾಗಿರುವುದು ಹೇಗೆ?!
ಬೆಂಗಳೂರು , ಬುಧವಾರ, 16 ಅಕ್ಟೋಬರ್ 2019 (09:00 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗಿರುವಾಗ ಫೋನ್, ಇಂಟರ್ನೆಟ್ ಏನೂ ಬಳಸುವ ಹಾಗಿಲ್ಲ. ಹಾಗಿದ್ದರೂ ಸ್ಪರ್ಧಿಗಳ ಸೋಷಿಯಲ್ ಮೀಡಿಯಾ ಅಕೌಂಟ್ ಸಕ್ರಿಯವಾಗಿರುವುದು ಹೇಗೆ ಎಂದು ಕೆಲವು ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.


ಬಿಗ್ ಬಾಸ್ ಶುರುವಾಗಿ ಆಗಲೇ ಎರಡು ದಿನವಾಗಿದೆ. ಆದರೆ ಸ್ಪರ್ಧಿಗಳ ವೈಯಕ್ತಿಕ ಇನ್ ಸ್ಟಾಗ್ರಾಂ, ಫೇಸ್ ಬುಕ್ ಖಾತೆಗಳು ಈಗಲೂ ಚಾಲೂ ಆಗಿದೆ. ಇದು ಹೇಗೆ ಸಾಧ್ಯ ಎಂಬುದು ಕೆಲವರ ಪ್ರಶ್ನೆ.

ಆದರೆ ಈ ಸೆಲೆಬ್ರಿಟಿಗಳ ಅನುಪಸ್ಥಿತಿಯಲ್ಲಿ ಅವರಿಗೆ ಬೆಂಬಲವಾಗಿರಲು ಅವರ ಆಪ್ತರೇ ಸೋಷಿಯಲ್ ಮೀಡಿಯಾ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ನಟಿ ದೀಪಿಕಾ ದಾಸ್, ಪ್ರಿಯಾಂಕಾ ಸೇರಿದಂತೆ ಹಲವರ ಖಾತೆಯಿಂದ ಈಗಲೂ ಪೋಸ್ಟ್ ಗಳು ಪ್ರಕಟವಾಗುತ್ತಲೇ ಇರುತ್ತವೆ. ಹಾಗಂತ ಅದನ್ನು ಅವರೇ ಮಾಡುತ್ತಾರೆ ಎಂದರ್ಥವಲ್ಲ. ಅವರ ಆಪ್ತರು ಈ ಖಾತೆಗಳನ್ನು ನಿಭಾಯಿಸುತ್ತಾರೆ ಎಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದರ ರಾಣಾ ಬರ್ತ್ ಡೇಗೆ ರಕ್ಷಿತಾ ಪ್ರೇಮ್ ಕೊಟ್ಟ ಬೆಸ್ಟ್ ಗಿಫ್ಟ್ ಏನು ಗೊತ್ತಾ?