Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಗೆ ಹೋದ ಚಂದ್ರಿಕಾ ಸನ್ನಿಧಿ ಕೈಗೆ ಸಿಕ್ಕಿದ್ದು ಹೇಗೆ?! ಟ್ರೋಲ್ ಆದ ನಟಿ ಪ್ರಿಯಾಂಕ

ಬಿಗ್ ಬಾಸ್ ಗೆ ಹೋದ ಚಂದ್ರಿಕಾ ಸನ್ನಿಧಿ ಕೈಗೆ ಸಿಕ್ಕಿದ್ದು ಹೇಗೆ?! ಟ್ರೋಲ್ ಆದ ನಟಿ ಪ್ರಿಯಾಂಕ
ಬೆಂಗಳೂರು , ಶನಿವಾರ, 19 ಅಕ್ಟೋಬರ್ 2019 (09:34 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸ್ಪರ್ಧಿಯಾಗಿರುವ ನಟಿ ಪ್ರಿಯಾಂಕ ಅಲಿಯಾಸ್ ಅಗ್ನಿಸಾಕ್ಷಿ ಚಂದ್ರಿಕಾ ಮತ್ತೆ ಟ್ರೋಲ್ ಗೊಳಗಾಗಿದ್ದಾರೆ.


ಮೊನ್ನೆಯಷ್ಟೇ ಬಿಗ್ ಬಾಸ್ ಮನೆಯೊಳಗೆ ಕ್ಯಾಮರಾಗೆ ಕಿಸ್ ಮಾಡಿ ನಾನಾ ರೀತಿಯಲ್ಲಿ ಟ್ರೋಲ್ ಗೊಳಗಾಗಿದ್ದ ಪ್ರಿಯಾಂಕ ಈಗ ಮತ್ತೆ ಟ್ರೋಲ್ ಗೊಳಗಾಗಿದ್ದಾರೆ.

ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಪ್ರಿಯಾಂಕಾ ಚಂದ್ರಿಕಾ ಪಾತ್ರಧಾರಿಯಾಗಿ ಹಳೆಯ ಗೋಡೌನ್ ಒಂದರಲ್ಲಿ ಅಡಗಿ ಕುಳಿತಿದ್ದಾಗ ನಾಯಕಿ ಸನ್ನಿಧಿ ಮತ್ತು ಅಂಜಲಿ ಪಾತ್ರಧಾರಿ ಕೈಗೆ ಸಿಕ್ಕಿಬೀಳುತ್ತಾರೆ. ಇದನ್ನೇ ಇಟ್ಟುಕೊಂಡು ಇನ್ ಸ್ಟಾಗ್ರಾಂನಲ್ಲಿ ಆಕೆಯನ್ನು ಟ್ರೋಲ್ ಮಾಡಲಾಗುತ್ತಿದೆ. ನೋಡಿ, ಚಂದ್ರಿಕಾ ಬಿಗ್ ಬಾಸ್ ಮನೆಯಲ್ಲಿ ಅಡಗಿ ಕುಳಿತಿದ್ದಾಗ ಸನ್ನಿಧಿ ಕೈಗೆ ಸಿಕ್ಕಿಬಿದ್ದಳು ಎಂದು ನೆಟ್ಟಿಗರು ಆಕೆಯನ್ನು ತಮಾಷೆ ಮಾಡುತ್ತಿದ್ದಾರೆ. ಅಸಲಿಗೆ ಈ ಧಾರವಾಹಿ ಚಿತ್ರೀಕರಣ ಮುಗಿಸಿ ಚಂದ್ರಿಕಾ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್ ಕುಮಾರ್ ಸಾಹಸದ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ