Publish Date: Wed, 10 Feb 2021 (08:54 IST)
Updated Date: Wed, 10 Feb 2021 (08:56 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿ ಇನ್ನೇನು ಆರಂಭವಾಗಲಿದೆ. ಮೂಲಗಳ ಪ್ರಕಾರ ಈ ತಿಂಗಳ ಅಂತ್ಯಕ್ಕೆ ದೊಡ್ಮನ ಕತೆ ಶುರುವಾಗಲಿದೆ. ಆದರೆ ಈ ಬಿಗ್ ಬಾಸ್ ಮನೆಗೆ ಹೋಗುವ ಸದಸ್ಯರ ಬಗ್ಗೆ ಹಲವು ಊಹಾಪೋಹಗಳು ಹಬ್ಬುತ್ತಲೇ ಇವೆ.
ಆದರೆ ಅಸಲಿಗೆ ಈಗಾಗಲೇ ಕೇಳಿಬರುತ್ತಿರುವ ಕೆಲವು ನಟ-ನಟಿಯರು ಬಿಗ್ ಬಾಸ್ ಮನೆಗೆ ಹೋಗೋದು ಅನುಮಾನವೇ. ಬಿಗ್ ಬಾಸ್ ಮನೆಗೆ ಹೋಗುವವರ ಪೈಕಿ ಕೇಳಿಬರುತ್ತಿರುವ ಹೆಸರಿನಲ್ಲಿ ಪ್ರಮುಖವಾಗಿರುವುದು ನಟ ಅನಿರುದ್ಧ್, ಜೊತೆ ಜೊತೆಯಲಿ ನಾಯಕಿ ಮೇಘಾ ಶೆಟ್ಟಿ, ವಿನಯಾ ಪ್ರಸಾದ್ ಹೆಸರುಗಳು. ಈ ಮೂವರೂ ತಮ್ಮ ತಮ್ಮ ಧಾರವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವವರು. ಇವರು ಅಭಿನಯಿಸುತ್ತಿರುವ ಧಾರವಾಹಿಗಳ ಟಿಆರ್ ಪಿ ಅದ್ಭುತವಾಗಿದ್ದು, ಸದ್ಯಕ್ಕೆ ನಿಲ್ಲುವ ಛಾನ್ಸೇ ಇಲ್ಲ. ಅಷ್ಟೇ ಅಲ್ಲ, ತಾವು ಯಾವುದೇ ಕಾರಣಕ್ಕೆ ಧಾರವಾಹಿ ಬಿಟ್ಟು ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು ಅನಿರುದ್ಧ್, ಮೇಘಾ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನು, ವಿನಯಾ ಪ್ರಸಾದ್ ಕೂಡಾ ಪಾರು ಧಾರವಾಹಿಯ ಜೀವಾಳ. ಅವರು ಬಿಗ್ ಬಾಸ್ ಗಾಗಿ ಧಾರವಾಹಿ ಬಿಡುವುದು ಸಾಧ‍್ಯವೇ ಇಲ್ಲ. ಹೀಗಾಗಿ ಈ ನಟ-ನಟಿಯರ ಬಿಗ್ ಬಾಸ್ ಪ್ರವೇಶದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎನ್ನಬಹುದು.