Publish Date: Sat, 23 Jan 2021 (09:07 IST)
Updated Date: Sat, 23 Jan 2021 (09:09 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿ ಯಾವಾಗ ಎನ್ನುತ್ತಿರುವ ಪ್ರೇಕ್ಷಕರಿಗೆ ಕಿಚ್ಚ ಸುದೀಪ್ ಕಡೆಯಿಂದ ಸಿಹಿ ಸುದ್ದಿಯೊಂದು ಸದ್ಯದಲ್ಲೇ ಹೊರಬೀಳಲಿದೆ.
ಸುದೀಪ್ ಈಗಾಗಲೇ ಬಿಗ್ ಬಾಸ್ ಪ್ರೋಮೋ ಶೂಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯದಲ್ಲೇ 8 ನೇ ಸೀಸನ್ ನ ಆರಂಭ ಯಾವಾಗ ಎಂಬ ವಿಚಾರವನ್ನು ಕಲರ್ಸ್ ಆವೃತ್ತಿ ಬಹಿರಂಗಪಡಿಸಲಿದೆ. ಮೂಲಗಳ ಪ್ರಕಾರ ಮಾರ್ಚ್ ನಲ್ಲಿ ಬಿಗ್ ಬಾಸ್ ಆರಂಭವಾಗುವ ನಿರೀಕ್ಷೆಯಿದೆ. ಇದರ ಬಗ್ಗೆ ಅಧಿಕೃತ ಪ್ರಕಟಣೆ ಸದ್ಯದಲ್ಲೇ ಹೊರಬೀಳಲಿದೆ.