Publish Date: Sat, 26 Dec 2020 (10:15 IST)
Updated Date: Sat, 26 Dec 2020 (10:24 IST)
ಬೆಂಗಳೂರು: ಎವರ್ ಗ್ರೀನ್ ನಟಿ ಸುಧಾರಾಣಿ ಈಗ ಧಾರವಾಹಿಯೊಂದರ ಪ್ರಮುಖ ಪಾತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರೆ.
ಸದ್ಯಕ್ಕೆ ಧಾರವಾಹಿಯ ಟಿಆರ್ ಪಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಈ ಹೊತ್ತಿನಲ್ಲಿ ಮತ್ತೆ ಮೊದಲಿನ ಚಾರ್ಮ್ ಗೆ ತರಲು ವಾಹಿನಿ ಕೆಲವು ಎಪಿಸೋಡ್ ಗಳಿಗೆ ಸುಧಾರಾಣಿ ಮತ್ತು ನಟ ವಿಜಯ್ ಸೂರ್ಯರನ್ನು ಕರೆತರುತ್ತಿದೆ. ವಿಜಯ್ ಸೂರ್ಯ ನಾಯಕಿ ಅನು ಸಿರಿಮನೆಯನ್ನು ಮದುವೆಯಾಗಲು ಬರುವ ವರನಾಗಿ ಕಾಣಿಸಿಕೊಳ‍್ಳಲಿದ್ದರೆ, ಅವರ ಜೊತೆಗೆ ಸುಧಾರಾಣಿ ಕೂಡಾ ಇರುತ್ತಾರೆ. ಈಗಾಗಲೇ ಪ್ರೋಮೋ ಹರಿಯಬಿಡಲಾಗಿದ್ದು, ಸುಧಾರಾಣಿ ಎಂಟ್ರಿ ಕೊಡುತ್ತಿರುವ ಸುದ್ದಿ ಅಭಿಮಾನಿಗಳಲ್ಲಿ ವಿಶೇಷ ಸಂಚಲನ ಮೂಡಿಸಿದೆ.