Publish Date: Sat, 28 Nov 2020 (09:15 IST)
Updated Date: Sat, 28 Nov 2020 (09:19 IST)
ಬೆಂಗಳೂರು: ಮಗುವಾದ ಬಳಿಕ ನಟಿ ಶ್ವೇತಾ ಚೆಂಗಪ್ಪ ಬಣ್ಣದ ಲೋಕದಿಂದ ಕೆಲವು ಸಮಯ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಶ್ವೇತಾ ಮರಳಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಮಜಾ ಟಾಕೀಸ್ ನಲ್ಲಿ ಸೃಜನ್ ಲೋಕೇಶ್ ಪತ್ನಿ ರಾಣಿ ಪಾತ್ರ ಮಾಡುತ್ತಿದ್ದ ಶ್ವೇತಾ ಗರ್ಭಿಣಿಯಾದ ಬಳಿಕ ಶೋನಿಂದ ಹೊರನಡೆದಿದ್ದರು. ಆದರೆ ಈಗ ಮತ್ತೆ ಮಜಾ ಟಾಕೀಸ್ ಗೆ ರಾಣಿಯಾಗಿ ಮರಳಿದ್ದಾರೆ. ವಿಶೇಷವೆಂದರೆ ಈ ಪಾತ್ರದಲ್ಲಿ ಶ್ವೇತಾ ಅಷ್ಟು ಜನಪ್ರಿಯವಾಗಿದ್ದರು. ಹೀಗಾಗಿ ಶ್ವೇತಾ ಸ್ಥಾನಕ್ಕೆ ಬೇರೆ ಯಾರನ್ನೂ ಸೃಜನ್ ಶೋಗೆ ಕರೆತಂದಿರಲಿಲ್ಲ. ಇದೀಗ ರಾಣಿ ಕಮ್ ಬ್ಯಾಕ್ ಮಾಡಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.