Publish Date: Sun, 22 Nov 2020 (09:09 IST)
Updated Date: Sun, 22 Nov 2020 (09:18 IST)
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ರಾಗಿ ಮುದ್ದೆ ತಿನ್ನೋ ವಿಚಾರಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಿವೇದಿತಾ ತಮ್ಮ ಪತಿ ಚಂದನ್ ಜತೆ ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿವೇದಿತಾ ರಾಗಿ ಮುದ್ದೆಯನ್ನು ಚಮಚ ಬಳಸಿ ತಿನ್ನುವುದನ್ನು ಹೇಳಿಕೊಡುತ್ತಾರೆ. ಕೈಯಲ್ಲಿ ತಿನ್ನೋದೆಲ್ಲಾ ಚೆನ್ನಾಗಿರಲ್ಲ ಎಂದು ಕೇವಲವಾಗಿ ಮಾತನಾಡಿದ್ದಕ್ಕೆ ನಿವೇದಿತಾ ಮೇಲೆ ನೆಟ್ಟಿಗರು ಗರಂ ಆಗಿದ್ದಾರೆ. ಸಂಸ್ಕೃತಿ ಬಗ್ಗೆ ತಲೆಬುಡ ಗೊತ್ತಿಲ್ಲದ ಇಂತಹವರನ್ನೆಲ್ಲಾ ಯಾಕೆ ಕಾರ್ಯಕ್ರಮಕ್ಕೆ ಕರೆತರುತ್ತೀರಿ ಎಂದು ಸೃಜನ್ ಲೋಕೇಶ್ ರನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೆ ಕೆಲವರು ಮೊದಲು ನಮ್ಮ ಆಚಾರ ವಿಚಾರಗಳನ್ನು ಸರಿಯಾಗಿ ತಿಳಿದುಕೋ ಎಂದು ನಿವೇದಿತಾಗೆ ಬುದ್ಧಿಮಾತು ಹೇಳಿದ್ದಾರೆ. ಅಂತೂ ರಾಗಿ ಮುದ್ದೆ ತಿನ್ನುವುದನ್ನೇ ಹಾಸ್ಯ ಮಾಡಲು ಹೋಗಿ ನೆಟ್ಟಿಗರ ಕೈಯಲ್ಲಿ ಚೆನ್ನಾಗಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.