Publish Date: Tue, 10 Nov 2020 (10:02 IST)
Updated Date: Tue, 10 Nov 2020 (10:04 IST)
ಬೆಂಗಳೂರು: ಕಿರುತೆರೆ, ಹಿರಿತೆರೆಯಲ್ಲಿ ಮಿಂಚುತ್ತಿರುವ ನಟಿ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಪರಸ್ಪರ ಪ್ರೀತಿಸುತ್ತಿದ್ದಾರಾ? ಇವರಿಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪ್ರಕಟಿಸುವ ಫೋಟೋ ನೋಡಿ ನೆಟ್ಟಿಗರು ಈ ಪ್ರಶ್ನೆಯನ್ನು ಕೇಳುತ್ತಲೇ ಇರುತ್ತಾರೆ.
ಆದರೆ ಈಗ ಈ ಅನುಮಾನವನ್ನು ಪುಷ್ಠೀಕರಿಸುವಂತಹ ಸುಳಿವನ್ನು ಕವಿತಾ ಗೌಡ ಮತ್ತು ತಾಯಿ ನೀಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಚಂದು ಗೌಡ ನಡೆಸಿಕೊಡುವ ಚಿಟ್ ಚ್ಯಾಟ್ ಕಾರ್ಯಕ್ರಮದಲ್ಲಿ ಕವಿತಾಗೆ ನೀವು ಮದುವೆಯಾಗುವ ಹುಡುಗನಲ್ಲಿ ಯಾವುದೆಲ್ಲಾ ಕ್ವಾಲಿಟಿ ಇರಬೇಕು ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸುವಾಗ ಬೇಕೆಂದೇ ಚಂದ ಇರ್ಬೇಕಾ? ಎಂದು ಚಂದು ಗೌಡ ಕಾಲೆಳೆದಿದ್ದಾರೆ. ಇದಕ್ಕೆ ಇಬ್ಬರೂ ಹೌದು ಎಂದಿದ್ದಾರೆ. ಇದಲ್ಲದೆ, ಗಡ್ಡ ಇರಬಾರದು, ಸಿಕ್ಸ್ ಪ್ಯಾಕ್ ಇರಬೇಕು, ನನಗಿಂತ ಉದ್ದ ಇರಬೇಕು ಎಂದೆಲ್ಲಾ ಹೇಳಿ ಕವಿತಾ ಹುಡುಗನ ಬಗ್ಗೆ ವಿವರಣೆ ನೀಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಚಂದನ್ ಬಗ್ಗೆಯೇ ಹೇಳಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.