Publish Date: Fri, 30 Oct 2020 (11:27 IST)
Updated Date: Fri, 30 Oct 2020 (11:29 IST)
ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮಾ ಧಾರವಾಹಿ ಮೂಲಕ ಮನೆ ಮಾತಾಗಿದ್ದ ನಟ ಚಂದು ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಮ್ಮ ಬಹುಕಾಲದ ಗೆಳತಿ ಶಾಲಿನಿ ಜತೆ ಚಂದು ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರೂ ಬಹಳ ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ವಿವಾಹಕ್ಕೆ ಕಿರುತೆರೆಯ ಸ್ನೇಹಿತರೂ ಆಗಮಿಸಿದ್ದರು. ಧಾರವಾಹಿ ಮೂಲಕ ಮಿಂಚಿದ್ದ ಚಂದು ಈಗ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದ್ದು, ಡಿ ಬಾಸ್ ದರ್ಶನ್ ಅವರ ರಾಬರ್ಟ್ ಸಿನಿಮಾದಲ್ಲಿ ಒಂದು ಪಾತ್ರ ಮಾಡುತ್ತಿದ್ದಾರೆ.