Publish Date: Tue, 10 Nov 2020 (09:22 IST)
Updated Date: Tue, 10 Nov 2020 (09:24 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಶೂಟಿಂಗ್ ನಡುವೆ ತಮಗೆ ಸಿಕ್ಕ ಸಣ್ಣ ಬಿಡುವಿನ ವೇಳೆಯನ್ನು ಸರಿಯಾಗಿಯೇ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಪತ್ನಿ ಅಶ್ವಿನಿ, ಸ್ನೇಹಿತರು, ಸಂಗಡಿಗರೊಡನೆ ಉತ್ತರ ಕರ್ನಾಟಕದ ಜೋಯಿಡಾ ವನ್ಯ ಜೀವಿ ವಲಯಕ್ಕೆ ಭೇಟಿ ನೀಡಿರುವ ಪುನೀತ್ ಕ್ಯಾಮರಾ ಹಿಡಿದುಕೊಂಡು ಪಕ್ಕಾ ಪರಿಸರ ಪ್ರೇಮಿಯ ಅವತಾರ ತಾಳಿದ್ದಾರೆ. ಇಲ್ಲಿನ ಜನರೊಂದಿಗೆ ಬೆರೆತು, ಇಲ್ಲಿನ ವನ್ಯ ಜೀವಿಗಳ ಬಗ್ಗೆ ತಿಳಿದುಕೊಂಡು ಖುಷಿಯಿಂದ ಕಾಲಕಳೆದಿದ್ದಾರೆ. ಮೊನ್ನೆಯಷ್ಟೇ ಪುನೀತ್ ದಾಂಡೇಲಿ ಗುಡ್ಡಗಾಡು ಪ್ರದೇಶದಲ್ಲಿ ನೆಲದಲ್ಲಿ ಕೂತು ಸಾಮಾನ್ಯರಂತೇ ಕೂತು ಊಟ ಮಾಡುತ್ತಿದ್ದ ಫೋಟೋಗಳು ವೈರಲ್ ಆಗಿತ್ತು.